ಶ್ರೀದೇವಿ ಬಯಲಾಟ ಸಮಿತಿ ಮೆಲ್ಕಾರ್ ಇದರ ವತಿಯಿಂದ ರವಿವಾರ ಮೆಲ್ಕಾರ್ ಶ್ರೀದೇವಿ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು 17ನೇ ವರ್ಷದ ಸೇವೆಯಾಟವಾಗಿ ಶ್ರೀದೇವಿ ಮಹಾತ್ಮೆ’ ಕಥಾಭಾಗವನ್ನು ರಾತ್ರಿ 9.30 ಕ್ಕೆ ಬಯಲಾಟವಾಗಿ ಆಡಿತೋರಿಸಲಿರುವವರು. ಅದೇ ದಿನ ಬೆಳಿಗ್ಗೆ ಗಂಟೆ 12 ಕ್ಕೆ ಶ್ರೀದೇವಿಯ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು. ಸಂಜೆ ಗಂಟೆ 6 ಕ್ಕೆ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದಿಂದ ಗೊಂಬೆ ಕುಣಿತ ಸುಡುಮದ್ದು ಪ್ರದರ್ಶನದೊಂದಿಗೆ ಶ್ರೀದೇವಿಯ ಭವ್ಯ ಮೆರವಣಿಗೆ ಹೊರಡಲಿರುವುದು ಎಂದು ಶ್ರೀದೇವಿ ಬಯಲಾಟ ಸಮಿತಿ ಮೆಲ್ಕಾರ್ ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಮೆಲ್ಕಾರಿನಲ್ಲಿ ಶ್ರೀದೇವಿ ಮಹಾತ್ಮೆ"