ಬಂಟ್ವಾಳ: ಬಾಬರಿ ಮಸ್ಜಿದ್ ಧ್ವಂಸವನ್ನು ಖಂಡಿಸಿ, ಮಸ್ಜಿದನ್ನು ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿ, ಕೈಕಂಬದಿಂದ ಅಲಖಝಾನ ಹಾಲ್ ವರೆಗೆ ಮೌನ ರ್ಯಾಲಿ ನಡೆದು ಅಲ್ ಖಝಾನ ಹಾಲ್ ನಲ್ಲಿ ಸೆಮಿನಾರ್ ನಡೆಯಿತು.
ಎಸ್.ಡಿ ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರ್, ಮಾತನಾಡಿ ಕಳೆದ 25 ವರ್ಷದಲ್ಲಿ ಈ ದೇಶದ ಜಾತ್ಯಾತೀತ ಮನಸ್ಸುಗಳು ಬಾಬರಿ ಮಸ್ಜಿದ್ ಧ್ವಂಸದ ನ್ಯಾಯದ ನಿರೀಕ್ಷೆಯಲ್ಲಿ ವರ್ಷಂಪ್ರತಿ ಡಿ. 6 ನ್ನು ಕರಾಳ ದಿನವನ್ನಾಗಿ ಆಚರಿಸುತ್ತಾ ನ್ಯಾಯಕ್ಕಾಗಿ ಆಗ್ರಹಿಸುತ್ತಾ ಬಂದಿದೆ ಎಂದರು.
ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿದರು.ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಅಧ್ಯಕ್ಷ ಶಾಹುಲ್ ಎಸ್.ಎಚ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವಾಝ್ ಉಳ್ಳಾಲ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ನಂದರಬೆಟ್ಟು, ತಲಪಾಡಿ ಜುಮ್ಮಾ ಮಸ್ಜಿದ್ ಅಧ್ಯಕ್ಷ ಇದ್ದಿನಬ್ಬ , ಅಕ್ಕರಂಗಡಿ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಮೀದ್, ಪರ್ಲಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಶಾಕಿರ್ , ಬಂಟ್ವಾಳ ಪುರಸಭೆ ಸದಸ್ಯ ಮೋನಿಶ್ ಅಲಿ, ಪುದು ಗ್ರಾಮ ಪಂಚಾಯತ್ ಸದಸ್ಯ ಸುಲೈಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ತಹಶಿಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ನೀಡಲಾಯಿತು. ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಬಾವ ಸ್ವಾಗತಿಸಿದರು. ಸತ್ತಾರ್ ಕಲ್ಲಡ್ಕ ವಂದಿಸಿದರು. ಮುಹಮ್ಮದ್ ರಿಯಾಝ್ ನಿರೂಪಿಸಿದರು.
Be the first to comment on "ಎಸ್ ಡಿ ಪಿ ಐ ನಿಂದ ಮೌನ ಮೆರವಣಿಗೆ, ಸಭೆ"