ಬಂಟ್ವಾಳ: ನೀವು ಬೆಂಗಳೂರು ಮಹಾನಗರ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿರುವುದನ್ನು ನೋಡಿದ್ದೀರಿ. ಅದೇ ರೀತಿ ಮೇಲ್ಕಾರ್ ಕಾಣಿಸಲಿದೆ. ಇಲ್ಲಿಗೆ ಹೊಸ ನೋಟ ದೊರಕಲಿದೆ.
ಹೀಗಂದವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ.
ಸೋಮವಾರ ಸಂಜೆ ಅಧಿಕಾರಿಗಳೊಂದಿಗೆ ಮೇಲ್ಕಾರಿನಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಅವರು ವೀಕ್ಷಿಸಿದ ಬಳಿಕ ಸ್ಥಳದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೆಲ್ಕಾರ್‌ನಿಂದ ಮಾರ್ನಬೈಲ್‌ವರೆಗೆ ಸರಕಾರದ ಅಪೆಂಡಿಕ್ಸ್ ಯೋಜನೆಯನ್ವಯ ಚತುಷ್ಪಥ ಕಾಮಗಾರಿ ಭರದಿಂದ ಸಾಗಿದೆ. ಇಕ್ಕೆಲಗಳ ರಸ್ತೆಗಳಿಗೂ ದಾರಿ ದೀಪ ಅಳವಡಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಈ ರಸ್ತೆ ಬೆಂಗಳೂರು ಮಾದರಿಯಲ್ಲಿ ಕಂಗೊಳಿಸಲಿದೆ ಎಂದು ಸಚಿವ ಹೇಳಿದರು.
ಸಿಆರ್‌ಎಫ್ ಯೋಜನೆಯಡಿ ಬಿ.ಸಿ.ರೋಡ್ ಸರ್ಕಲ್‌ನಿಂದ ಪಾಣೆಮಂಗಳೂರು ಪೇಟೆ ಮೂಲಕ ನಂದಾವರದವರೆಗೆ ಹಾಗೂ ಅಲ್ಲಿಂದ ಮಾರ್ನಬೈಲ್ ತನಕ ಲೋಕೋಪಯೋಗಿ ಇಲಾಖೆ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಅವರು ವಿವರಿಸಿದರು.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಸ್ಥಳೀಯ ಪುರಸಭಾ ಸದಸ್ಯರಾದ ಸಂಜೀವಿ, ಜೆಸಿಂತಾ ಡಿಸೋಜ, ಮಾಜಿ ಸದಸ್ಯರಾದ ದಾಮೋದರ ಮೆಲ್ಕಾರ್, ಮಹಮ್ಮದ್ ರಫೀಕ್, ಪಕ್ಷದ ಪ್ರಮುಖರಾದ ಮಾಧವ ಎಸ್.ಮಾವೆ, ಉಮೇಶ ಬೋಳಂತೂರು, ಯೂಸುಫ್ ಕರಂದಾಡಿ, ಮಧುಸೂದನ ಶೆಣೈ, ತಹಶೀಲ್ದಾರ್ ಪುರಂದರ ಹೆಗ್ಡೆ, ಹೆದ್ದಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಬ್ದುಲ್ ರಹಿಮಾನ್, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿವರ್ಾಹಕ ಎಂಜಿನಿಯರ್ ಉಮೇಶ ಭಟ್, ಸಹಾಯಕ ಎಂಜಿನಿಯರ್ ಅರುಣ್ ಪ್ರಕಾಶ್, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮತ್ತಿತರರು ಇದ್ದರು
Be the first to comment on "ಮೇಲ್ಕಾರ್ ಪೇಟೆಗೆ ಬೆಂಗಳೂರು ಲುಕ್"