ಬಂಟ್ವಾಳ: ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಪ್ರವಾಸ ವಿವರ ಹೀಗಿದೆ.
ಬೆಳಿಗ್ಗೆ ಗಂಟೆಗೆ 10.30 ನಾವೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವಿಷ್ಣುಕೇಸರಿ ಪ್ರೆಂಡ್ಸ್ ನಾವೂರು ಇದರ ವತಿಯಿಂದ ಪುರುಷರ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬೆಳಿಗ್ಗೆ 11.30 ಕ್ಕೆ ಅಗ್ರಾರ್ ಚರ್ಚ್ ಮೈದಾನದಲ್ಲಿ ಮಂಗಳೂರು ಧರ್ಮಪ್ರಾಂತ್ಯ ಬಿಷಪ್ ರೆ.ಫಾ.ಎಲೋಶಿಯಸ್ ಪೌಲ್ ಡಿ’ಸೋಜಾ ಇವರ ಗುರು ದೀಕ್ಷೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವರು., ಮಧ್ಯಾಹ್ನ 3.30 ಕ್ಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಕೃಷಿ ಉತ್ಸವ ಹಾಗೂ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ದಶಮನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.15 ಕ್ಕೆ ಮಂಗಳೂರು ಪುರಭವನದಲ್ಲಿ ವೇಣುಗೋಪಾಲ್ ಇವರಿಗೆ ಅಭಿನಂದನೆ ಹಾಗೂ ’ಪಾಲ್ ಕಡಲ್’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ, ಸಂಜೆ 6 ಕ್ಕೆ ಶ್ರೀ ಮಾರಿಯಮ್ಮ ಯುವಕ ಸಂಘ ರಿ. ಕೊಳ್ನಾಡು ಸೆರ್ಕಳ ಇದರ ೨೨ನೇವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವರು.
ಸೋಮವಾರದ ಕಾರ್ಯಕ್ರಮ
ಬೆಳಿಗ್ಗೆ 10.30 ಗಂಟೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಇದರ ಪ್ರೌಢಶಾಲಾ ವಿಭಾಗ ಮತ್ತು ಕಾಲೇಜು ವಿಭಾಗಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಕ್ಕೆ ಬಿ.ಸಿ.ರೋಡ್ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುವರೆಂದು ಸಚಿವರ ಆಪ್ತಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಸಚಿವ ರಮಾನಾಥ ರೈ ಪ್ರವಾಸ ವಿವರ"