ವಿಟ್ಲ: ಕೀಳರಿಮೆ ಬಿಟ್ಟು ಮುನ್ನಡೆದಾಗ ವಿಜಯ ನಮ್ಮದಾಗುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಭಾನುವಾರ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿರುವ ಸಂಘದ ನಿವೇಶನದಲ್ಲಿ ವಿಟ್ಲ ಕುಲಾಲ ಸಂಘ ವತಿಯಿಂದ ಮಹಿಳಾ ಘಟಕದ ಸಹಕಾರದೊಂದಿಗೆ 18ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬನ ಸಹಕಾರದಲ್ಲಿ ಸಂಘದ ಕಟ್ಟಡ ನಿರ್ಮಾಣ ಮುಂದಿನ 9 ತಿಂಗಳ ಒಳಗೆ ನಿರ್ಮಾಣವಾಗಬೇಕಾಗಿದೆ. ಇದಕ್ಕೆ ಬೇಕಾದ ಸಂಪತ್ತಿಗೆ ಯಾವ ಕೊರತೆಯೂ ಬಾರದೆ ಎಲ್ಲವನ್ನೂ ದೇವಿ ನೀಡಲಿದ್ದಾಳೆ ಎಂದು ತಿಳಿಸಿದರು.ಸ್ವಜಾತಿ ಬಾಂದವರ ಮಕ್ಕಳಿಗೆ ಪ್ರೋತ್ಸಾಹಧನ, ವಿವಿಧ ಆಟೋಟಗಳ ಬಹುಮಾನ, ಪ್ರತಿಭಾ ಪುರಸ್ಕಾರ ವಿತರಣೆ ನಡೆಯಿತು. ರಾಜ್ಯ ಕುಂಬಾರರ ಮಹಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಕುಲಾಲ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ ಮಲೆತ್ತಡ್ಕ ಪುಣಚ ವಹಿಸಿದ್ದರು.
ಬಂಟ್ವಾಳ ಪುರಸಭೆ ಸದಸ್ಯ ಸದಾಶಿವ ಬಂಗೇರ, ಕೊಲ್ಯ ಕುಲಾಲರ ಸಂಘದ ಉಪಾಧ್ಯಕ್ಷ ಸಂಜೀವ ಸೋಮೇಶ್ವರ, ವಿಟ್ಲ ಕುಲಾಲ ಮಹಿಳಾ ಘಟಕ ಅಧ್ಯಕ್ಷೆ ರೇವತಿ ರವೀಂದ್ರ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸ್ಥಾಪಕಾಧ್ಯಕ್ಷ ರಮಾನಾಥ ವಿಟ್ಲ ಸ್ವಾಗತಿಸಿ, ಪ್ರಸ್ತಾವನೆಗೈದರು. ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್ ವಿಟ್ಲ ವರದಿವಾಚಿಸಿದರು. ಮಹಿಳಾ ಘಟಕದ ಕೋಶಾಧಿಕಾರಿ ಮೀನಾಕ್ಷಿ ನಾರಾಯಣ ಪುಣಚ ಬಹುಮಾನಿತರ ಪಟ್ಟಿ ಓದಿದರು. ಸಂಘಟನಾ ಕಾರ್ಯದರ್ಶಿ ದಿವಾಕರ ಕೋಡಿ ವಿಟ್ಲ ವಂದಿಸಿದರು. ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಕೀಳರಿಮೆ ಬಿಟ್ಟು ಮುನ್ನಡೆದರೆ ಯಶಸ್ಸು: ಮಾಣಿಲ ಸ್ವಾಮೀಜಿ"