ಬಂಟ್ವಾಳ: ಪ್ರತಿಯೊಂದು ಕಾರ್ಯಕ್ರಮವೂ ಅಚ್ಚುಕಟ್ಟು. ಸಮಯಕ್ಕೆಇಲ್ಲಿ ಪ್ರಾಧಾನ್ಯತೆ. ಒಂದೊಂದೂ ಮೈನವಿರೇಳಿಸುವ ಕಾರ್ಯಕ್ರಮ. ಪ್ರತಿಯೊಂದೂ ಮಾಹಿತಿಪೂರ್ಣ.
ಇದು ಭಾನುವಾರ ಬಂಟ್ವಾಳ ಬ್ರಹ್ಮರಕೂಟ್ಲುವಿನಲ್ಲಿ ನಡೆದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವದ ಒಂದು ಝಲಕ್.
ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶ, ವಿದೇಶಗಳ ನೃತ್ಯರೂಪಕಗಳ ಪ್ರತಿಯೊಂದು ಕಾರ್ಯಕ್ರಮಕ್ಕೂ ಚಪ್ಪಾಳೆ ಮೂಲಕ ನೆರೆದಿದ್ದ ಪ್ರೇಕ್ಷಕರು ಪ್ರೋತ್ಸಾಹ ನೀಡಿದರು.
ಕೇರಳದ ಮೋಹಿನಿಯಾಟಂ, ಬಡಗುತಿಟ್ಟು ಮತ್ತು ತೆಂಕು ತಿಟ್ಟಿನ ಯಕ್ಷಗಾನ ಪ್ರದರ್ಶನ, ಆಂಧ್ರದ ಬಂಜಾರ ನೃತ್ಯ, ರೋಮಾಂಚನಕಾರಿ ಸ್ಟಂಟ್ ಸಹಿತ ಮಣಿಪುರಿ ಸ್ಟಿಕ್ ಡ್ಯಾನ್ಸ್ ಮತ್ತು ದೋಲ್ ಚಲಮ್ ನೃತ್ಯ, ಶ್ರೀಲಂಕಾ ನೃತ್ಯ ವೈಭವ, ಮಲ್ಲಕಂಬದಲ್ಲಿ ಸಾಹಸಮಯ ಮತ್ತು ರೋಪ್ ಕಸರತ್ತು, ಕಥಕ್, ಭರತನಾಟ್ಯ, ಗುಜರಾತಿನ ಹೂಡೋರಾಸ್, ಮಹಾರಾಷ್ಟ್ರದ ಲಾವಣಿ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯಾ, ಒರಿಸ್ಸಾದ ಗೋಟಿಪೂವ ಮತ್ತು ಯೋಗ ನೃತ್ಯ, ವಂದೇ ಮಾತರಂ ಮತ್ತಿತರ ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ನೃತ್ಯ ಮತ್ತು ನೃತ್ಯ ರೂಪಕ ಗಮನ ಸೆಳೆಯಿತು.
ಉದ್ಘಾಟನೆ:
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ, ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ, ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಪ್ರಮುಖರಾದ ಸುದರ್ಶನ್ ಜೈನ್, ಕೆ.ಸೇಸಪ್ಪ ಕೋಟ್ಯಾನ್, ಪಿಯೂಸ್ ಎಲ್.ರಾಡ್ರಿಗಸ್, ಎನ್.ಸುಲೇಮಾನ್, ವಿದ್ಯಾ ಅಶ್ವನಿ ಕುಮಾರ್ ರೈ, ಪ್ರತಿಭಾ ಎ.ರೈ, ಪ್ರಕಾಶ ಕಾರಂತ, ಐತಪ್ಪ ಆಳ್ವ, ಜಗನ್ನಾಥ ಚೌಟ, ಸದಾನಂದ ಡಿ.ಶೆಟ್ಟಿ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ಡಾ.ಗಿರೀಶ ಭಟ್ ಅಜೆಕ್ಕಳ ವಂದಿಸಿದರು. ಸಂಚಾಲಕ ಡಾ.ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಗಮನ ಸೆಳೆದ ಆಳ್ವಾಸ್ ಸಾಂಸ್ಕೃತಿಕ ವೈಭವ"