ಬಂಟ್ವಾಳ: ಬಿ.ಸಿ.ರೋಡಿನ ಫ್ಲೈಓವರ ಕಡೆ ಡ್ರೈನೇಜ್ ಮಾಡಿದರೆ ಯಾರಿಗೆ ಅನುಕೂಲ?
ಹೀಗೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಉತ್ತರಿಸಲು ತಡವರಿಸಿದರು.
ಬಂಟ್ವಾಳದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲ ಮಾತನಾಡಿದ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್, ಬಿ.ಸಿ.ರೋಡ್ ಪೇಟೆಯ ಸಮಗ್ರ ಅಭಿವೃದ್ಧಿಗೆ ಸರಿಯಾದ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಡಿಸಿಪ್ಲೀನ್ ಇಲ್ಲದಂತೆ ಬಿ.ಸಿ.ರೋಡ್ ಬೆಳೆಯುತ್ತಿದೆ, ಇದನ್ನು ಸರಿದಾರಿಗೆ ತರಲು ಏನೇನು ಕ್ರಮ ಕೈಗೊಳ್ಳಬೇಕು ಎಂದು ಪುರಸಭಾ ಸದಸ್ಯರನ್ನು ಪ್ರಶ್ನಿಸಿದರು.
ಅಧ್ಯಕ್ಷ ರಾಮಕೃಷ್ಣ ಆಳ್ವ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಗೋವಿಂದ ಪ್ರಭು, ಸದಾಶಿವ ಬಂಗೇರ, ಮೋನಿಶ್ ಆಲಿ, ದೇವದಾಸ ಶೆಟ್ಟಿ, ವಾಸು ಪೂಜಾರಿ ಮೊದಲಾದವರು ತಮ್ಮ ಅಭಿಪ್ರಾಯ ತಿಳಿಸಿದರು.
ಈ ಸಂದರ್ಭ ತಮ್ಮ ಯೋಜನೆಯನ್ನು ವಿವರಿಸಿದ ಜಿಲ್ಲಾಧಿಕಾರಿ, ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.
ಬಿ.ಸಿ.ರೋಡ್ ಅಭಿವೃದ್ಧಿಗೆ ಡಿಸಿ ಕಂಡುಕೊಂಡ ಕ್ರಮಗಳು ಇವು.
- ತಾತ್ಕಾಲಿಕ ವ್ಯವಸ್ಥೆಯಲ್ಲಿ ರಸ್ತೆಯಲ್ಲೇ ವ್ಯಾಪಾರ ಮಾಡುವವರ ತೆರವು, ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ
- ಬಿ.ಸಿ.ರೋಡಿನಲ್ಲಿರುವ ಎಲ್ಲ ಅಂಗಡಿಗಳ ಎದುರು ಎರಡು ಬಕೆಟ್ ಗಳನ್ನು ಇಡುವಂತೆ ಸೂಚಿಸಬೇಕು. ಅದರಲ್ಲಿ ತ್ಯಾಜ್ಯವನ್ನು ಅವರು ಹಾಕಲೇಬೇಕು. ಇದನ್ನು ಪಾಲಿಸದೇ ಇದ್ದಲ್ಲಿ, ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸುವಂಥ ಕಠಿಣ ಕ್ರಮ ಕೈಗೊಳ್ಳಬೇಕು.
- ಬಿ.ಸಿ.ರೋಡಿನ ಕೈಕುಂಜ ರಸ್ತೆಯಲ್ಲಿ ಮಾರ್ಕ್ ಮಾಡಿದ ಸ್ಥಳವನ್ನು ಗುರುತಿಸಿ, ಪಾರ್ಕಿಂಗ್ ಗೆ ಸೂಕ್ತ ಜಾಗ ಕಲ್ಪಿಸಬೇಕು. ಮಲ್ಟಿಲೆವೆಲ್ ಪಾರ್ಕಿಂಗ್ ಗೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಬೇಕು.
Be the first to comment on "ಬಿ.ಸಿ.ರೋಡ್ ಅಶಿಸ್ತಿಗೆ ಡಿಸಿ ಚಾಟಿ"