ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕಾನೂನು ಸಾಕ್ಷರತಾ ರಥ, ಸಂಚಾರಿ ನ್ಯಾಯಾಲಯ ಮತ್ತು ಲೋಕ ಅದಾಲತ್ ನವೆಂಬರ್ 26ರಿಂದ 29ವರೆಗೆ ನಡೆಯಲಿದೆ.
26ರಂದು ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಕಾನೂನು ಸಾಕ್ಷರತಾ ಸಂಚಾರಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಬಳಿಕ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ, ತುಂಬೆ ಜ್ಯೂನಿಯರ್ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಮಧ್ಯಾಹ್ನ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
27ರಂದು ಬೆಳಗ್ಗೆ ಬಂಟ್ವಾಳ ಬೈಪಾಸಿನಲ್ಲಿರುವ ಗೋವಿಂದಸ್ವಾಮಿ ಭಜನಾ ಮಂದಿರ ವಠಾರದಲ್ಲಿ, ವಿಟ್ಲ ಕಂಬಳಬೆಟ್ಟಿನಲ್ಲಿ ಮೊಹಿಯುದ್ದೀನ್ ಇಬ್ರಾಹಿಂ ಜಮಾತ್ ಕಮಿಟಿ ಕನ್ಯಾನ ರಹ್ಮಾನಿಯಾ ಜಮಾತ್ ಕಮಿಟಿಯಲ್ಲಿ ಕಾರ್ಯಕ್ರಮ ನಡೆಯುವುದು.
28ರಂದು ಮಂಚಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವಠಾರ, ಕರಿಂಗಾಣ ಶಾರದಾಂಬಾ ಭಜನಾ ಮಂದಿರ, ಸಜೀಪಮೂಡ ಗ್ರಾಪಂ ವಠಾರದಲ್ಲಿ ಕಾರ್ಯಾಗಾರ ನಡೆಯುವುದು.
29ರಂದು ರಾಯಿ ಗ್ರಾಪಂ ವಠಾರ, ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಾಗಾರ ನಡೆಯಲಿದೆ. 29ರಂದು ಸಂಜೆ 4 ಗಂಟೆಗೆ ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ನಡೆಯುವುದು. ಬಂಟ್ವಾಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯುವುದು.
Be the first to comment on "26ರಿಂದ 29ವರೆಗೆ ಕಾನೂನು ಸಾಕ್ಷರತಾ ರಥ ಸಂಚಾರ"