ಬಂಟ್ವಾಳ: ಬಂಟ್ವಾಳ ಪುರಸಭೆಯ ಸದಸ್ಯರು ಆಯ್ಕೆಯಾಗಿ ವರ್ಷ ಮೂರಾಯಿತು! ಅಧ್ಯಕ್ಷರು ಬದಲಾದರು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ.
ಪ್ರಥಮ ಆಡಳಿತಾವಧಿಗೆ ಅಧ್ಯಕ್ಷರಾಗಿದ್ದ ವಸಂತಿ ಚಂದಪ್ಪ ಅವರ ಎರಡೂವರೆ ವರ್ಷದ ಅವಧಿಯಲ್ಲೂ ಎರಡೆರಡು ಬಾರಿ ಸ್ಥಾಯಿ ಸಮಿತಿಯ ರಚನೆ ಬಗ್ಗೆ ಪ್ರಸ್ತಾಪವಾಗಿತ್ತು.
ಅದು ಕಾರ್ಯಗತವಾಗಲಿಲ್ಲ. ಬಳಿಕ ರಾಮಕೃಷ್ಣ ಆಳ್ವ ಅಧ್ಯಕ್ಷರಾದರು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷ ಸೀಟ್ ಹಾಗೆಯೇ ಖಾಲಿ ಉಳಿದಿತ್ತು.
ಈವರೆಗೆ ಸ್ಥಾಯಿ ಸಮಿತಿ ಬಗ್ಗೆ ಯಾರೊಬ್ಬರು ತಲೆ ಕೆಡಿಸಿಕೊಳ್ಳಲಿಲ್ಲ. ಸ್ಥಾಯಿ ಸಮಿತಿ ರಚನೆಯ ಕುರಿತಂತೆ ಸ್ಪಷ್ಟ ನಿರ್ಧಾರಗಳು ಆಡಳಿತ ಪಕ್ಷದ ಮುಖಂಡರಿಂದ ಹೊರ ಬಿದ್ದಿಲ್ಲ.
ಪುರಸಭೆ ಆಡಳಿತಾವಧಿ ಇನ್ನೇನು ಎರಡು ವರ್ಷಗಳಲ್ಲಿ ಮುಗಿಯುತ್ತದೆ. ಅಷ್ಟರೊಳಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗುತ್ತಾರೋ ಇಲ್ಲವೋ ಎಂಬುದು ಕುತೂಹಲದ ಪ್ರಶ್ನೆ.
Be the first to comment on "ಪುರಸಭೆಗೆ ಸಿಗುವರೇ ಸ್ಥಾಯಿ ಸಮಿತಿ ಅಧ್ಯಕ್ಷರು?"