ಬಂಟ್ವಾಳ: ಜಾಗತಿಕ ಮಟ್ಟದ ಹಲವು ಸಮಸ್ಯೆಗಳಿಗೆ ಶಾಂತಿ, ಸಹಬಾಳ್ವೆ, ಭ್ರಾತೃತ್ವದ ಸಂದೇಶದಮೂಲಕ ರೋಟರಿ ಪರಿಹಾರ ನೀಡುತ್ತದೆ ಎಂದು ರೋಟರಿ ಜಿಲ್ಲೆ 3131 ಮಾಜಿ ಗವರ್ನರ್ ಮಹೇಶ್ ಕೊಡ್ಬಾಗಿ ಹೇಳಿದರು.
ಬಂಟವಾಳದ ಬಂಟರ ಭವನದಲ್ಲಿ ಎರಡು ದಿನ ನಡೆದ ರೋಟರಿ ಜಿಲ್ಲೆ 3181ರ ರೋಟರಿ ಫೌಂಡೇಷನ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಬಂಟ್ವಾಳ ರೋಟರಿ ಕ್ಲಬ್ ಆತಿಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಗವರ್ನರ್ ಜಿ. ಕೆ. ಬಾಲಕೃಷ್ಣನ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಗವರ್ನರ್ ಡಾ. ನಾಗಾರ್ಜುನ್ , ಜಿಲ್ಲಾ ರೋಟರಿ ಫೌಂಡೇಷನ್ ಚಯರ್‌ಮೆನ್ ಕೃಷ್ಣ ಶೆಟ್ಟಿ, ರೋಟರಿ ಜಿಲ್ಲಾ ತರಬೇತುದಾರ ಡಾ.ರವಿ ಅಪ್ಪಾಜಿ, ನಿಯೋಜಿತ ಗವರ್ನರ್‌ಗಳಾದ ಸುರೇಶ್ ಚೆಂಗಪ್ಪ, ರೋಹಿನಾಥ ಪಿ. , ವಲಯ 4ರ ಅಸಿಸ್ಟೆಂಟ್ ಗವರ್ನರ್ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಬಿ. ಕೆ. ಮೋಹನ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗ, ಕಾರ್ಯದರ್ಶಿ ಮಹಮ್ಮದ್ ವಳವೂರು, ಸಮಾವೇಶದ ಸಂಚಾಲಕ ಡಾ. ರಮೇಶಾನಂದ ಸೋಮಯಾಜಿ ಉಪಸ್ಥಿತರಿದ್ದರು.
ಮಾಜಿ ಜಿಲ್ಲಾ ಗವರ್ನರ್ ಬೆಂಗಳೂರಿನ ಕೆ.ಪಿ. ನಾಗೇಶ್ ಸಂದೇಶ ನೀಡಿದರು.
ಮಾಜಿ ಗವರ್ನರ್‌ಗಳಾದ ಕೆ.ಪಿ. ನಾಗೇಶ್, ರವಿ ವಡ್ಲಮನಿ, ಅವಿನಾಶ್ ಪೊದ್ದಾರ್ ರೋಟರಿ ಫೌಂಡೇಷನ್ ಬಗ್ಗೆ ವಿವಿಧ ಮಾಹಿತಿ ನೀಡಿದರು. ಪುತ್ತೂರು ಕ್ಲಬ್ಬಿನ ರಾಮಕೃಷ್ಣ , ಬಂಟ್ವಾಳ ಕ್ಲಬ್‌ನ ಡಾ. ರಮೇಶಾನಂದ ಸೋಮಯಾಜಿ ಮತ್ತು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗಾ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಕ್ಲಬ್ಬಿನ ಸುಮಾರು 60 ಸದಸ್ಯರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಞಾನ ಐತಾಳ್ ಭರತನಾಟ್ಯ ಪ್ರಸ್ತುತಪಡಿಸಿದರು.
ನ. 20ರಂದು ನಡೆದ ಸಮಾರೋಪದಲ್ಲಿ ರೋಟರಿ ಜಿಲ್ಲೆಯ ಮಾಜಿ ಗವರ್ನರ್ ರವಿ ವಡ್ಲಮನಿ, ಅವಿನಾಶ್ ಪೊದ್ದಾರ್ , ಜಿಲ್ಲಾ ರೋಟರಿ ಪೌಂಡೇಷನ್ ಚಯರ್‌ಮೆನ್ ಕೃಷ್ಣ ಶೆಟ್ಟಿ ಮಾತನಾಡಿದರು.
ಜಿಲ್ಲಾ ಗವರ್ನರ್ ಡಾ . ನಾಗಾರ್ಜುನ ಎರಡು ದಿನಗಳ ಸಮಾವೇಶದ ಮೌಲ್ಯಮಾಪನ ನಡೆಸಿದರು. ಕಾರ್ಯದರ್ಶಿ ಕರುಣಾಕರ ರೈ ವಂದಿಸಿದರು. ಅಹ್ಮದ್ ಮುಸ್ತಾಫ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಜಾಗತಿಕ ಸಮಸ್ಯೆಗಳಿಗೆ ಶಾಂತಿ, ಸಹಬಾಳ್ವೆ ಪರಿಹಾರ"