ಬಂಟ್ವಾಳ: ಘನತ್ಯಾಜ್ಯ ವಿಲೇವಾರಿ ಬಂಟ್ವಾಳ ಪುರಸಭೆಯ ಜವಾಬ್ದಾರಿ. ಇದಕ್ಕೆ ಸದಸ್ಯರೆಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು. ಲಿಖಿತ ರೂಪದಲ್ಲಿ ನನ್ನ ಬಳಿ ಯಾವುದೇ ಕಂಪ್ಲೈಂಟ್ ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವೆ.
ಪ್ರತಿ ಬಾರಿಯೂ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ ಹೋಗುತ್ತೀರಷ್ಟೇ, ಬಳಿಕ ಮತ್ತೊಂದು ಸಭೆಗೆ ತಾವು ಹಾಜರಾಗುತ್ತೀರಿ. ತದನಂತರ ತಾವ್ಯಾರೂ ಸಮಸ್ಯೆಗಳ ಬಗ್ಗೆ ಲಿಖಿತ ದೂರು ನೀಡುವ ಪರಿಪಾಠ ಇಟ್ಟುಕೊಂಡಿಲ್ಲ. ಹೀಗಾಗಿ ಬಂಟ್ವಾಳದಲ್ಲಿ ಕಸದ ಸಮಸ್ಯೆ ಬೆಟ್ಟದಷ್ಟಾಗಿದೆ.
ಹೀಗೆಂದು ಗರಂ ಆಗಿ ಪ್ರತಿಕ್ರಿಯಿಸಿದವರು ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್.
ಮಂಗಳವಾರ 2016-17ನೇ ಸಾಲಿಗೆ ಬಂಟ್ವಾಳ ಪುರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ, ಬೀದಿ ಗುಡಿಸುವುದು, ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆ, 2ನೇ ಹಂತದ ಸಾಗಣೆ ಕೆಲಸದ ಹೊರಗುತ್ತಿಗೆಯನ್ನು ತಯಾರಿಸುವ ಕುರಿತು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಗಾರ್ಗಿ ಜೈನ್, ಸಭೆ ಕಳೆದ ಬಳಿಕ ಸಮಸ್ಯೆಗಳನ್ನು ತನಗೆ ಲಿಖಿತರೂಪದಲ್ಲಿ ನೀಡಿದರೆ ಅಗತ್ಯ ಕ್ರಮವನ್ನು ತಾನು ಇಲ್ಲಿ ಇರುವಷ್ಟು ದಿನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಧ್ಯಕ್ಷ ರಾಮಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಆರೋಗ್ಯಾಧಿಕಾರಿ ಪ್ರಸಾದ್, ಅಧಿಕಾರಿಗಳಾದ ರಜಾಕ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಉಪಸ್ಥಿತರಿದ್ದರು. ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಗಂಗಾಧರ್, ಜಗದೀಶ ಕುಂದರ್, ವಸಂತಿ ಚಂದಪ್ಪ, ಯಾಸ್ಮೀನ್, ಜೆಸಿಂತಾ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
Be the first to comment on "ಘನತ್ಯಾಜ್ತ ವಿಲೇವಾರಿ ಬಂಟ್ವಾಳ ಪುರಸಭೆ ಜವಾಬ್ದಾರಿ"