ವಿಟ್ಲ: ದ.ಕ. ಮತ್ತು ಉಡುಪಿ ಜಿಲ್ಲಾ ಹಾಫ್‌ಕಾಮ್ಸ್ ಮಂಗಳೂರು, ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆ ಮತ್ತು ಕೋಡಪದವು ಹಾಲು ಉತ್ಪಾಧಕರ ಸಹಕಾರಿ ಸಂಘ ಇವರ ಜಂಟಿ ಸಹಯೋಗದಲ್ಲಿ ತೋಟಗಾರಿಕಾ ಬೆಳೆಗಳ “ಕೊಯ್ಲೋತ್ತರ ನಿರ್ವಹಣೆ ಮತ್ತು ಸಂಸ್ಕರಣೆ” ಹಾಗೂ ಕೃಷಿ ಮಾಹಿತಿ ಕಾರ್ಯಕ್ರಮ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆಯಿತು.
ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ರವೀಶ ಶೆಟ್ಟಿ ಉದ್ಘಾಟಿಸಿದರು. ನಿವೃತ್ತ ಜೇನು ಪ್ರವರ್ತಕ ಬಾಲಕೃಷ್ಣ ಭಟ್ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಹಾಫ್ಕಾಮ್ಸ್‌ನ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ವಹಿಸಿದರು.
ಹಾಫ್ ಕಾಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಜೋ. ಪ್ರದೀಪ ಡಿ ಸೋಜಾ, ಕೆ ಅಬ್ದುಲ್ಲಾ ಕುಕ್ಕಿಲ, ಪ್ರಗತಿಪರ ಕೃಷಿಕ ರಾಜಾರಾಮ ಭಟ್ ಬಲಿಪಗುಳಿ, ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮ, ವಿಟ್ಲ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಇಝಿಜುದ್ದೀನ್, ಕೋಡಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಜಿ ರಾಮಣ್ಣ ಉಪಸ್ಥಿತರಿದ್ದರು.
Be the first to comment on "ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣೆ ಮಾಹಿತಿ ಕಾರ್ಯಾಗಾರ"