ಬಂಟ್ವಾಳ: ನದಿಯಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆ ದಾಳಿ ನಡೆಸಿದೆ.
ಸರಪಾಡಿ ಗ್ರಾಮದ ಮಣಿನಾಲ್ಕೂರು, ಕಡವಿನಬಾಗಿಲು, ಅರ್ಮುಡಿ, ಪೆರ್ಲ, ಬಿಯಾಪಾದೆ ಎಂಬಲ್ಲಿ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕರಾದ ನವೀನ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ದಿಡೀರ್ ದಾಳಿ ನಡೆಸಿದರು.ಈ ಸಂದರ್ಭ ಎರಡು ಗ್ಯಾಸ್ ಸಿಲಿಂಡರ್, ಸ್ಟವ್, ಹಾರೆ, ಬುಟ್ಟಿ ಇನ್ನಿತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಯಿತು.
ಕಾರ್ಯಾಚರಣೆ ವೇಳೆ ನದಿ ತಟದಲ್ಲಿ ಮರಳುಗಾರಿಕೆಯವರು ತಂಗಲು ಹಾಕಿದ ಡೇರೆಯನ್ನು ಸಂಪೂರ್ಣವಾಗಿ ತೆರವು ಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ಬಂಟ್ವಾಳ ಕಂದಾಯ ನಿರೀಕ್ಷಕರಾದ ನವೀನ್, ಗ್ರಾಮ ಕರಣಿಕರಾದ ಜನಾರ್ಧನ್,ಪ್ರವೀಣ್, ರಾಜು ಲಮಾಣಿ, ಅನಿಲ್, ನಿಂಗಪ್ಪ
ಸಿಬ್ಬಂದಿಗಳಾದ ವೆಂಕಟರಮಣ, ಲೋಕನಾಥ್, ಸಂತೋಷ್, ಸಂದೀಪ್. ಕೆ, ರಮೇಶ್. ಬಾಬು. ತಿಲಕ್ ರಾಜ್ ಕಾರ್ಯಾಚರಣೆ ವೇಳೆ ಸಹಕರಿಸಿದ್ದರು.
Be the first to comment on "ಅಕ್ರಮ ಮರಳು ಅಡ್ಡೆಗೆ ದಾಳಿ"