ವಿಟ್ಲ: ಜಾನುವಾರು ಅಕ್ರಮ ಸಾಗಾಟದ ವಾಹನವೊಂದನ್ನು ವಿಟ್ಲ ಪೊಲೀಸರು ಖಚಿತ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದಿದ್ದಾರೆ.
ಕಂಟೈನರ್ ಮೂಲಕ ಹಿಂಸಾತ್ಮಕವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುವ ಖಚಿತ ಮಾಹಿತಿ ಆಧಾರದಲ್ಲಿಸಾಲೆತ್ತೂರನಲ್ಲಿ ದಾಳಿ ನಡೆಸಿದ ವಿಟ್ಲ ಪೊಲೀಸರ ತಂಡ ಕಂಟೈನರ್ ಲಾರಿ ಸಹಿತ 9 ಎಮ್ಮೆ ಹಾಗೂ 7 ಎತ್ತುವನ್ನು ವಶಕ್ಕೆ ಪಡೆಯಿತು.
ಚಾಲಕ ನಂಜನಗೂಡು ಕಾವುಲೆಂದ ನಿವಾಸಿ ಫತಿಬ್ (28), ಬೇಲೂರು ಕೆಚ್ಚಬ್ಬಳ್ಳಿ ಹೆಸೂರು ನಿವಾಸಿ ರಹಿಮಾನ್ (38), ಕೊಪ್ಪಲು ಕಲ್ಲಾರೆ ಕಟಾಯ ನಿವಾಸಿ ಗೋಪಾಲ ಗೌಡ (53) ಬಂಧಿತರಾಗಿದ್ದಾರೆ. ಹಾಸನದ ರೈತರಿಂದ ಖರೀದಿಸಿದ ಜಾನುವಾರುಗಳನ್ನು ಕಾಸರಗೋಡಿನ ಕಸಾಯಿಖಾನೆಗೆ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು.
ಕಂಟೈನರ್ ಒಳಗೆ ಕೈಕಾಲಿಗೆ ಹಾಗೂ ಕುತ್ತಿಗೆಗೆ ಹಗ್ಗ ಹಾಕಿ ಕಟ್ಟಲಾಗಿತ್ತು. ಇಳಿಸಿದಾಗ 8 ಎಮ್ಮೆ ಹಾಗೂ 7 ಹೋರಿ ಪತ್ತೆಯಾಗಿದೆ. ಜಾನುವಾರುಗಳಿಗೆ 80 ಸಾವಿರ ರೂ ಹಾಗೂ 4 ಲಕ್ಷ ರೂ ಕಂಟೈನರ್ ವಾಹನದ ಮೌಲ್ಯವೆಂದು ಅಂದಾಜಿಸಲಾಗಿದೆ. ಹಾಸನದಿಂದ ಬೋಳಂತೂರು ಮಾರ್ಗವಾಗಿ ಮಂಜೇಶ್ವರ ಮೂಲಕ ಕೇರಳ ಕಡೆಗೆ ಕಂಟೈನರ್ ಮೂಲಕ ಜಾನುವಾರುಗಳನ್ನು ಕೊಂಡೊಯ್ಯಲಾಗುತ್ತಿತ್ತು.
ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಸಹಾಯಕ ಉಪನಿರೀಕ್ಷಕ ರುಕ್ಮಯ ಮೂಲ್ಯ, ಪೊಲೀಸ್ ಸಿಬ್ಬಂದಿಗಳಾದ ಸೋಮಶೇಖರ್, ರಾಮಚಂದ್ರ, ಜಯಕುಮಾರ್, ಸಂಜೀವ, ಶ್ರೀಧರ್, ಲೋಕೇಶ್, ಪ್ರವೀಣ್ ಕುಮಾರ್, ಉಮೇಶ್, ಗೃಹರಕ್ಷಕದಳದ ಸಂಜೀವ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Be the first to comment on "ಜಾನುವಾರು ಅಕ್ರಮ ಸಾಗಾಟ ಪತ್ತೆ"