ಬಂಟ್ವಾಳ: ರಾಜ್ಯ ಪ್ರಶಸ್ತಿ ಪುರಸ್ಖೃತ ಶಂಭೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್‍ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಅಂಗನವಾಡಿ ಪುಟಾಣಿ ಧನ್ವಿತ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಶಂಭೂರು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಮಾತನಾಡಿ ಭವ್ಯ ಭಾರತವನ್ನು ಸುದೃಡವಾಗಿ ಮಾಡಲು ಇಂದಿನ ಮಕ್ಕಳ ಭವಿಷ್ಯ ಪ್ರಾಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಕರ ಜೊತೆ ಪೋಷಕರು ಮಹತ್ತರ ಪಾತ್ರವಹಿಸಬೇಕು ಎಂದು ಹೇಳಿದರು. ತಾ.ಪಂ. ಸದಸ್ಯೆ ಗಾಯತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಉದಯ ಕುಮಾರ್, ಶಂಭೂರು ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾ ಎನ್, ನಿವೃತ್ತ ಶಿಕ್ಷಕಿ ನೀಲಮ್ಮ, ಶಂಭೂರು ಶಾಲೆ ಎಸ್‌ಡಿಎಮ್‌ಸಿ ಅಧ್ಯಕ್ಷ ಆನಂದ ಸಾಲಿಯಾನ್, ಶಂಭೂರು ಪಂ. ಸದಸ್ಯೆ ವಿಶಾಲಾಕ್ಷಿ, ಆರೋಗ್ಯ ಕಾರ್‍ಯಕರ್ತೆ ಸುಮನ ಕ್ರಾಸ್ತಾ, ಅಂ. ಮೇಲ್ವಿಚಾರಕಿ ಶಾಲಿನಿ, ಅನ್ನಪೂರ್ಣ ಗೊಂಚಲು ಅಧ್ಯಕ್ಷೆ ಭಾರತಿ, ಅಂ. ಕಾರ್‍ಯಕರ್ತೆ ಪ್ರೇಮಾ, ಸವಿತಾ, ಅಂ. ಸಹಾಯಕಿ ಸುನೀತ ಮತ್ತಿತರರು ಉಪಸ್ಥಿತದ್ದರು. ಅಂಗನವಾಡಿ ಪುಟಾಣಿ ಮಕ್ಕಳಿಂದ ವಿವಿಧ ವೈವಿದ್ಯಮಯ ಕಾರ್‍ಯಕ್ರಮ ನಡೆಯಿತು.
Be the first to comment on "ಶಂಭೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ"