ತಾಳಿತ್ತನೂಜಿ: ಟಿಪ್ಪು ಫ್ರೆಂಡ್ಸ್ ತಾಳಿತ್ತನೂಜಿ ವತಿಯಿಂದ ಟಿಪ್ಪು ಜಯಂತಿಯನ್ನು ಸರವು ಜಂಕ್ಷನ್ ನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಡೆದ ದ್ವಜಾರೋಹಣಕ್ಕೆ ಊರಿನ ಹಿರಿಯ ಮುಖಂಡ ಯೂಸುಫ್ ಹಾಜಿ ಸರವು ನೇತೃತ್ವ ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ಸದಸ್ಯ ರಿಯಾಝ್ ಕಡಂಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಮ್ಮರ್ ಎಂ.ಎಸ್ ಮದಕ, ಮಹಮ್ಮದ್ ತಾಳಿತ್ತನೂಜಿ,ಖಾಲಿದ್,ಸಿರಾಜ್ ಮದಕ, ಮಹಮ್ಮದ್ ಬೆದ್ರಕಾಡು, ನಿಸಾರ್ ಮೊದಲಾದವರು ಪಾಲ್ಗೊಂಡಿದ್ದರು. ಟಿಪ್ಪು ಫ್ರೆಂಡ್ಸ್ ಸದಸ್ಯರಾದ ಹಂಝ ಸ್ವಾಗತಿಸಿ ಝಿಯಾದ್ ವಂದಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಟಿಪ್ಪು ಫ್ರೆಂಡ್ಸ್ ವತಿಯಿಂದ ಟಿಪ್ಪು ಜಯಂತಿ ಆಚರಣೆ"