ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಗೆ ಚುನಾವಣೆಗಾಗಿ ಅಖಾಡ ಸಿದ್ಧವಾಗಿದ್ದು ಡಿ. 4ರಂದು ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ತಾಲೂಕಿನ ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಿಸಿದೆ.
ಈಗಾಗಲೇ ಚುನಾವಣೆಗಾಗಿ ನ. 2ರಂದು ಅಧಿಸೂಚನೆ ಹೊರಬಿದ್ದಿದ್ದು ಸೋಮವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ತಾಲೂಕು ಚುನಾವಣಾ ಶಾಖೆ ತಿಳಿಸಿದೆ.
ನ. 14 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. 15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ನ. 18 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಡಿ. 4ರಂದು ಬೆಳಗ್ಗೆ 8ರಿಂದ 4ರವರೆಗೆ ಮತದಾನ ನಡೆಯಲಿದ್ದು ಡಿ. 6ರಂದು ಮತ ಎನಿಕೆ ಕಾರ್ಯ ನಡೆಯುವುದು.
ಬಂಟ್ವಾಳ ತಾಲೂಕು ಎಪಿಎಂಸಿ ಚುನಾವಣೆಗೆ ಮಂಗಳೂರು ಯೋಜನಾ ನಿರ್ದೇಶಕ ಪ್ರಸನ್ನ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದು ಬಂಟ್ವಾಳ ತಾಲೂಕು ಕೃಷಿ ಅಧಿಕಾರಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಬಂಟ್ವಾಳ ತಾಲೂಕು ಕಚೇರಿಯಲ್ಲಿ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಸ್ವೀಕಾರವಾಗಲಿದೆ.
ಬಂಟ್ವಾಳ ಎಪಿಎಂಸಿಯಲ್ಲಿ ಪ್ರಸ್ತುತ ಬಿಜೆಪಿಯ ಅಧಿಕಾರಾವಧಿ ಜೂನ್ನಲ್ಲಿ ಮುಕ್ತಾಯಗೊಂಡಿದೆ. ಒಟ್ಟು 12 ಸದಸ್ಯ ಬಲವನ್ನು ಹೊಂದಿರುವ ಕಳೆದ ಬಾರಿ 8 ಬಿಜೆಪಿ, 4 ಕಾಂಗ್ರೆಸ್ ಸದಸ್ಯರನ್ನು ಹೊಂದಿತ್ತು. ಬಂಟ್ವಾಳ ಎಪಿಎಂಸಿ ವ್ಯಾಪ್ತಿಗೆ ಸುಮಾರು 45000 ಅಧಿಕ ಮತದಾರರನ್ನು ಹೊಂದಿದ್ದು 11 ಕ್ಷೇತ್ರ ಕೃಷಿಕರ ಹಾಗೂ ಒಂದು ಕ್ಷೇತ್ರ ವರ್ತಕರಿಗೆ ಮೀಸಲಿಟ್ಟಿದೆ.
Be the first to comment on "ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ಚುನಾವಣೆ ಅಖಾಡ ಸಿದ್ಧ"