ಬಂಟ್ವಾಳ: ಸರಕಾರದ ಕಾನೂನುಗಳನ್ನು , ನೀತಿ ನಿಯಮಗಳನ್ನು ಅನುಷ್ಟಾನಗೊಳಿಸಲು ಎಲ್ಲರ ಸಹಕಾರ ಅಗತ್ಯ, ಪ್ರತಿ ಗ್ರಾಮ ಮಟ್ಟದಲ್ಲಿ ಪಾಲನೆಯಾದಾಗ ಯಶಸ್ವಿಯಾಗುತ್ತದೆ, ಅದಕ್ಕೆ ಜನಪ್ರತಿನಿಧಿಗಳು ಇಲಾಖೆಯ ಜೊತೆ ಕೈಜೋಡಿಸಬೇಕು ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕಕರ್ೇರ ಹೇಳಿದರು. ಅವರು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ, ಗ್ರಾಮ ಪಂಚಾಯತ್ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಜಾಗೃತಿ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಮಾಜಘಾತುಕ ಶಕ್ತಿಗಳ ನಿಮರ್ೂಲನೆಗಾಗಿ ಇಚ್ಚಾಶಕ್ತಿಯನ್ನು ಮೈಗೂಡಿಸಿಕೊಳ್ಳಿ. ಕ್ರಿಯಾತ್ಮಕ ಯೋಚನೆಯನ್ನು ಬಹಿರಂಗವಾಗಿ ಮಾತನಾಡುವ ಕಾಲ ಬಂದಿದೆ. ಜಾಗೃತಿ ಶಿಬಿರ ಮೇಲ್ಪಂಕ್ತಿಯಾಗುವ ಆಶಾದಾಯಕ ಮನೋಭಾವ ಮೂಡಿಬರಲಿ ಎಂದರು.
ಕಾರ್ಯಕ್ರಮನ್ನು ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ ಪ್ರತಿಯೋಬ್ಬರು ಕ್ರಿಯಾತ್ಮಕರಾಗಿ ಧನಾತ್ಮಕ ಚಿಂತನೆಯೊಂದಿಗೆ ನ್ಯಾಯದ ಪರ ನಿಂತು ಇಲಾಖೆಗೆ ಸಹಕಾರ ನೀಡಿದಾಗ ಮಕ್ಕಳ ಮಾರಾಟ ಮತ್ತು ಮಹಿಳೆಯರ ದೌರ್ಜನ್ಯ ನಿಲ್ಲಲು ಸಾಧ್ಯ ಎಂದರು.
ವೇದಿಕೆಯಲ್ಲಿ ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿದೇರ್ಶಕ ಸುಂದರ ಪೂಜಾರಿ , ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಂಯಾನ್ ಮಿರಾಂದ, ಸಂಪನ್ಮೂಲ ವ್ಯಕ್ತಿಗಳಾದ ಪ್ರೇಮನಾಥ ಕಲ್ಮಾಡಿ, ಉಮೇಶ್ ನಿರ್ಮಲ್ , ಮಹಿಳಾ ರಕ್ಷಣಾ ಘಟಕದ ಕುಮಾರ್ ಮತ್ತು ರೆನ್ನಿ ಡಿ.ಸೋಜ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಬಂಟ್ವಾಳ ಸಿಡಿಪಿಒ ಮಲ್ಲಿಕಾ ಸ್ವಾಗತಿಸಿ, ಮೇಲ್ವಿಚಾರಕಿ ಭಾರತಿ ವಂದಿಸಿದರು. ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು
Be the first to comment on "ಗ್ರಾಮ ಪಂಚಾಯತ್ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಜಾಗೃತಿ ಶಿಬಿರ"