ಕಡೇಶ್ವಾಲ್ಯದಲ್ಲಿ ಸುಮಾರು ೬೮ ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಗ್ರಾ.ಪಂ.ಕಚೇರಿ ಹಾಗೂ ಸಭಾಂಗಣ ಕಟ್ಟಡ ಪ್ರಗತಿ ಸೌಧವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಲೋಕಾರ್ಪಣೆಗೊಳಿಸಿದರು.
ಗ್ರಾ.ಪಂ.ಸದಸ್ಯರೆಲ್ಲರೂ ಒಗ್ಗಟ್ಟಾಗಿ ಆಡಳಿತ ನೀಡಿದಾಗ ಇಂತಹ ಸುಂದರ ಕಟ್ಟಡಗಳು ನಿರ್ಮಾಣಗೊಳ್ಳುವುದಕ್ಕೆ ಸಾಧ್ಯವಿದ್ದು, ಜತೆಗೆ ಗ್ರಾಮದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಕಚೇರಿಯಂತೆ ಪಂಚಾಯತ್‌ನ ಸೇವೆಗಳು ಕೂಡ ಸುಂದರವಾಗಿರಬೇಕು ಎಂದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಭೇಟಿ ನೀಡಿ ಶುಭಹಾರೈಸಿದರು. ಬಂಟ್ವಾಳ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ಭಾರತಿ ಎಸ್.ರಾವ್, ಉಪಾಧ್ಯಕ್ಷ ಸುರೇಶ್ ಪೂಜಾರಿ ಕೆ, ತಾ.ಪಂ.ಕಾರ್ಯನಿರ್ವಹಣಾಽಕಾರಿ ಸಚಿನ್‌ಕುಮಾರ್, ಸಹಾಯಕ ನಿರ್ದೇಶಕ ವಿಶ್ವನಾಥ್, ನರೇಗಾ ಎಂಜಿನಿಯರ್ ಆತೀಶ್, ಪಂಚಾಯತ್‌ರಾಜ್ ಕಿರಿಯ ಎಂಜಿನಿಯರ್ ನಾಗೇಶ್, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗ್ರಾ.ಪಂ.ಸದಸ್ಯರು ಮೊದಲಾದವರಿದ್ದರು. ಪಿಡಿಒ ಸುನೀಲ್‌ಕುಮಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸುರೇಶ್ ಬನಾರಿ ವಂದಿಸಿದರು. ಮಲ್ಲಿಕಾ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.
BANTWAL MLA RAJESH NAIK INAUGURATED PRAGATI SOUDHA AT KADESHWALYA, BANTWAL TALUK, DAKSHINA KANNADA
Be the first to comment on "ಕಡೇಶ್ವಾಲ್ಯ: 68 ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ ಗ್ರಾಪಂ ಕಚೇರಿ ಸಭಾಂಗಣ ಉದ್ಘಾಟನೆ"