ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಇನ್ನೊವಾ ಕಾರೊಂದು ರಸ್ತೆ ವಿಭಾಜಕವನ್ನು ಏರಿ ಕುಳಿತ ಘಟನೆ ಬುಧವಾರ ಮಧ್ಯಾಹ್ನದ ವೇಳೆಗೆ ತುಂಬೆ ಜಂಕ್ಷನ್‌ನಲ್ಲಿ ನಡೆದಿದೆ. ಪುತ್ತೂರಿನ ವ್ಯಕ್ತಿಯೊಬ್ಬರು ಮಂಗಳೂರಿನಿಂದ ಪುತ್ತೂರು ಕಡೆಗೆ ತನ್ನ ಇನ್ನೊವಾದಲ್ಲಿ ಬರುತ್ತಿದ್ದಾಗ ವಾಹನ ಚಾಲನೆಯ ವೇಳೆ ತನ್ನ ಗಮನ ಬೇರಡೆಗೆ ತಿರುಗಿ ರಸ್ತೆಯಲ್ಲಿದ್ದ ಬ್ಯಾರೀಕೇಡ್‌ಗೆ ಡಿಕ್ಕಿ ಹೊಡೆದು ಈ ಅವಾಂತರ ಸೃಷ್ಟಿಯಾಗಿದೆ. ಇದೇ ವೇಳೆ ಹಿಂಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಬರುತ್ತಿದ್ದು ಇನ್ನೊವಾಕ್ಕೆ ಸ್ವಲ್ಪ ತರಚಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ರಸ್ತೆ ವಿಭಜಕ ಏರಿದ ಇನ್ನೋವಾ"