ಸುದ್ದಿಗಳು

ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಇರಾ: ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಇಂದು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಇರಾ ತಾಳಿತ್ತಬೆಟ್ಟು ಶಾಲಾಭಿವೃಧ್ದಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮುರಳೀಧರ ಭಂಡಾರಿ ,…


ಕಾನ ಪರಿಸರದಲ್ಲಿ ಪತ್ತೆಯಾದ ಕಾಡುಕೋಣಗಳು

ವಿಟ್ಲ: ಅಳಿಕೆ ಗ್ರಾಮದ ಕಾನ ಭಾಗದಲ್ಲಿ ಕಾಡು ಕೋಣಗಳು ಪತ್ತೆಯಾದ ಘಟನೆ ಭಾನುವಾರ ನಡೆದಿದೆ. ಕಾನ ಈಶ್ವರ ಭಟ್ ಅವರ ತೋಟದಲ್ಲಿ ಸಂಜೆ ಸಮಯ ಎರಡು ಕಾಡು ಕೋಣಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.


ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಶಾಖಾ ಕಾರ್ಯದರ್ಶಿಯಾಗಿ ಇರ್ಶಾದ್ ಗುಡ್ಡೆಅಂಗಡಿ ಆಯ್ಕೆ

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಆಲಡ್ಕ-ಪಾಣೆಮಂಗಳೂರು ಶಾಖಾ ನೂತನ ಕಾರ್ಯದರ್ಶಿಯಾಗಿ ಮುಹಮ್ಮದ್ ಇರ್ಶಾದ್ ಗುಡ್ಡೆಅಂಗಡಿ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಇಸ್ಹಾಕ್ ಫ್ಯಾಶನ್‌ವೇರ್ ಮತ್ತು ಅಬ್ದುಲ್ ಮುತ್ತಲಿಬ್ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಫ್ಯಾಶನ್ ಗೋಲ್ಡ್ ಅವರ ಅಧ್ಯಕ್ಷತೆಯಲ್ಲಿ…


ಕಾಲೇಜು ಛಾವಣಿ ಕುಸಿತ

ವಿಟ್ಲ: ವಿಟ್ಲದ ವಿಟ್ಲ ಪದವಿಪೂರ್ವ ಕಾಲೇಜಿನ ಶಿಥಿಲಗೊಂಡ ಛಾವಣಿಯೊಂದು ಕುಸಿದು ಬಿದ್ದಿದ್ದು, ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ವಿಟ್ಲದ ವಿಟ್ಠಲ ಪದವಿ ಪೂರ್ವ ಕಾಲೇಜಿನ ತರಗತಿ ಕೊಠಡಿಯ ಹಂಚಿನ ಛಾವಣಿ ಭಾನುವಾರ ಆಕಸ್ಮಿಕವಾಗಿ ಕುಸಿದು ಬಿದ್ದು ಭಾರೀ ಹಾನಿಯಾಗಿದೆ. ಮರದ…


ಕನ್ಯಾನದಲ್ಲಿ ವ್ಯಕ್ತಿಗೆ ಹಲ್ಲೆ, ಪೋಲೀಸ್ ಬಂದೋಬಸ್ತ್

ಕನ್ಯಾನ: ಇಲ್ಲಿನ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವ್ಯಕ್ತಿಯೋರ್ವರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಅಬೂಬಕ್ಕರ್(58) ಹಲ್ಲೆಗೊಳಗಾದ ವ್ಯಕ್ತಿ. ಅವರೀಗ ಸಮುದಾಯಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನ್ಯಾನದ ಚಂದ್ರಹಾಸ ಮತ್ತು ದಿನೇಶ ಅವರು…


ದ.ಕ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಬುಧವಾರದವರೆಗೆ ಮುಂದುವರಿಯಲಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲ ವಿದ್ಯಮಾನಗಳಿಗೆ ಸಂಬಂಧಿಸಿ ಅಹಿತಕರ ಘಟನೆ ನಡೆಯದಂತೆ ಮುನ್ಸೂಚನಾ ಕ್ರಮವಾಗಿ ಸೆ.144ರನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಈ ಆದೇಶ ಹೊರಡಿಸಿದ್ದಾರೆ ಎಂದು ಬಂಟ್ವಾಳ…


ಪಕ್ಷಬೇಧ ಮರೆತು ಶ್ರಮಿಸಿದರೆ ಯಶಸ್ಸು ಸಾಧ್ಯ

ಬಂಟ್ವಾಳ: ಪಕ್ಷಬೇಧ ಮರೆತು ಸಂಘಟನೆ ಅಭಿವೃದ್ಧಿಗೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದು ಮಾಜಿ ಸಚಿವ, ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನರಿಕೊಂಬಿನ ಮೊಗರ್ನಾಡಿನಲ್ಲಿರುವ ಶ್ರೀ ಲಕ್ಷ್ಮೀ ಬಿಲ್ಡಿಂಗ್ ನಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ…


ಎಪಿಎಂಸಿ: ಬಿಜೆಪಿ ಬೆಂಬಲಿತರ ಪಟ್ಟಿ ಪ್ರಕಟ

ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಭಾನುವಾರ ಸಂಜೆ ಪ್ರಕಟಗೊಂಡಿದೆ. ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಬಿಡುಗಡೆಗೊಳಿಸಿದ ಪಟ್ಟಿಯ ವಿವರ ಹೀಗಿದೆ. ಸಂಗಬೆಟ್ಟು (ಸಾಮಾನ್ಯ) ವಸಂತ…


ಕಬಡ್ಡಿ ಯುವಕರಿಗೆ ಸ್ಫೂರ್ತಿದಾಯಕ: ಈಶ್ವರಪ್ಪ

ಬಂಟ್ವಾಳ: ಗಂಡುಗಲಿಗಳ ಕ್ರೀಡೆಯಾಗಿರುವ ಕಬಡ್ಡಿ ಯುವಕರಿಗೆ ಸ್ಫೂರ್ತಿ ನೇತೃತ್ವ ಹಾಗೂ ಪ್ರೋತ್ಸಾಹವನ್ನು ನೀಡುತ್ತದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಹೇಳಿದರು. ಕರ್ನಾಟಕ ಅಮೆಚೂರು ಕಬಡ್ಡಿ ಎಸೋಸಿತೇಶನ್ ಇದರ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್…


ಭಾನುವಾರ ಬ್ಯಾಂಕ್ ವ್ಯವಹಾರ, ಗ್ರಾಹಕರಿಗೆ ಎಬಿವಿಪಿ ಸಹಕಾರ

ಬಂಟ್ವಾಳ: ಗ್ರಾಹಕರೇ ಗಾಬರಿಯಾಗಬೇಡಿ. ನಾವು ಹಳೇ ನೋಟುಗಳಾದ 500 ಮತ್ತು ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತೇವೆ. ಅದೂ 30 ಡಿಸೆಂಬರ್ 2016ವರೆಗೆ. ನಮ್ಮ ಬ್ಯಾಂಕಿಗೆ ಐದಾರು ದಿನದ  ಬಳಿಕ ಭೇಟಿ ನೀಡಿ ಸಹಕರಿಸಿ. ಹೀಗೆಂದು ಬ್ಯಾಂಕುಗಳು ನೋಟಿನ ಗೊಂದಲ…