ಸ್ಥಳೀಯ ಗ್ರಾಮ ಪಂಚಾಯಿತಿ ಬೋರ್ಡ್ ಹಾಕಿದೆ. ಶಾಲೆ, ಕಾಲೇಜುಗಳಲ್ಲಿ ಸ್ವಚ್ಛತೆಯ ಪಾಠ ಮಾಡಲಾಗುತ್ತಿದೆ. ಊರಿಗಿಡೀ ಬುದ್ಧಿ ಹೇಳುವವರೇ ಇವತ್ತು ಜಾಸ್ತಿ ಇರುವ ಕಾರಣ ಎಲ್ಲರೂ ಬುದ್ಧಿವಂತರೇ ಎಂದು ಪರಿಗಣಿಸಬೇಕಾಗುತ್ತದೆ.
ಹಾಗಾರರೆ, ಬೋರ್ಡು ಓದಲು ಬಾರದವರು, ಗಲೀಜು ಮನೋಸ್ಥಿತಿಯವರೇ ಈ ಕೆಲಸ ಮಾಡುತ್ತಾರೆ ಎಂದು ಸಣ್ಣ ಮಕ್ಕಳೂ ಹೇಳುವಂಥ ಕೃತ್ಯ ನಡೆಯುತ್ತಿರುವುದು ಬ್ರಹ್ಮರಕೂಟ್ಲು ಟೋಲ್ ಗೇಟ್ ನ ಸರ್ವೀಸ್ ರಸ್ತೆಯಲ್ಲಿ . ರಾಮಲ್ ಕಟ್ಟೆಯಿಂದ ಬ್ರಹ್ಮರಕೂಟ್ಲುವರೆಗೆ ಬರುವ ಸರ್ವೀಸ್ ರಸ್ತೆಯಲ್ಲಿ ಹಾಗೂ ತಲಪಾಡಿಯಿಂದ ಟೋಲ್ ಕಡೆ ತಿರುಗುವ ಸರ್ವೀಸ್ ರಸ್ತೆಯ ಬದಿಯಲ್ಲಿ ಕಸದ ರಾಶಿ ಕಾಣಿಸುತ್ತಿದೆ. ಸ್ಥಳೀಯ ಪಂಚಾಯಿತಿ ತೆರವುಗೊಳಿಸಿದರೂ ಮತ್ತೆ ಮತ್ತೆ ಹಾಕುವವರು ಇದ್ದಾರೆ ಎಂಬುದು ಖೇದಕರ ವಿಚಾರ.