ಜಿಲ್ಲಾ ಸುದ್ದಿ

ವಿಮಾನ ದುರಂತ ನೆನಪಿಸಿದ ಅಣಕು ಕಾರ್ಯಾಚರಣೆ – ಚಿತ್ರಗಳೊಂದಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಳಭಾಗದ ಕೆಂಜಾರು ಮೈದಾನದಲ್ಲಿ ವಿಮಾನ ದುರಂತ ತುರ್ತು ಪರಿಸ್ಥಿತಿ ನಿರ್ವಹಣೆಯ ಭಾಗವಾಗಿ ಶುಕ್ರವಾರ ವಿಮಾನ ದುರಂತ ಅಣಕು ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆ ಹೀಗಿತ್ತು:

ಒಂದೆಡೆ ವಿಮಾನವನ್ನು ಆವರಿಸಿದ ಬೆಂಕಿ, ಇನ್ನೊಂದೆಡೆ ದಟ್ಟ ಹೊಗೆ… ಅಗ್ನಿಶಾಮಕ ದಳದ ಕಾರ್ಯಾಚರಣೆ, ಆತಂಕದ ವಾತಾವರಣ, ಎಲ್ಲ ಕಡೆಯೂ ಬೊಬ್ಬೆ, ಸೈರನ್ ಸದ್ದು… ದುರಂತದ ಹೊಗೆ, ಬೆಂಕಿ ಮುಗಿಲು ಮುಟ್ಟಿತ್ತು… ಸುಮಾರು 117 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಹೊತ್ತ ಮಂಗಳಾ ವಿಮಾನ ಬೆಳಗ್ಗೆ 9.55ರ ಸುಮಾರಿಗೆ ಮಂಗಳೂರಿನಿಂದ ಮುಂಬಯಿಗೆ ಹೊರಟಿತು. ಟೇಕ್‌ಆಫ್ ವೇಳೆ ವಿಮಾನದಲ್ಲಿ ತಾಂತ್ರಿಕ ತೊಂದರೆಯುಂಟಾಗಿ ದುರಂತ ಸಂಭವಿಸಿದೆ. ಏಕಾಏಕಿ ವಿಮಾನ ಕೆಂಜಾರು ಮೈದಾನ ಸಮೀಪದ ಗುಡ್ಡದಲ್ಲಿ ಬಿದ್ದು ಬೆಂಕಿ ಹತ್ತಿಕೊಂಡಿತು. ದುರ್ಘಟನೆ ವೇಳೆ ಆತಂಕ ದಲ್ಲಿ ಕೆಲವು ಪ್ರಯಾಣಿಕರು ಗುರುಪುರ ನದಿಗೆ ಹಾರಿದರು. ವಿಮಾನ ದುರ್ಘಟನೆಯ ಬೆಂಕಿ ಹಾಗೂ ಹೊಗೆ ಕಿಲೋ ಮೀಟರ್ ದೂರಕ್ಕೆ ವ್ಯಾಪಿಸಿತು.

ಜಾಹೀರಾತು

ಬೆಳಗ್ಗೆ 10.20ರ ವೇಳೆಗೆ ದುರಂತ ನಡೆದಿದ್ದು 10.22ಕ್ಕೆ ನಿಲ್ದಾಣಕ್ಕೆ ಮಾಹಿತಿ ರವಾನೆಯಾಗಿದೆ. 10.30ಕ್ಕೆ ಅಗ್ನಿಶಾಮಕ ದಳ, 10.31ಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗಿದೆ. 10.37ರ ವೇಳೆಗೆ ಆಂಬ್ಯುಲೆನ್ಸ್ ಧಾವಿಸಿದ್ದು 10.44ಕ್ಕೆ ರಿಲೀಫಿಂಗ್ ಕ್ಯಾಂಪ್ ನಿರ್ಮಿಸಲಾಯಿತು. 10.56ಕ್ಕೆ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಅಧಿಕಾರಿಗಳು ಅದನ್ನು ವಶಕ್ಕೆ ಪಡೆದಿದ್ದಾರೆ.

ಆಸ್ಪತ್ರೆಗಳಿಗೆ ರವಾನೆ: ದುರ್ಘಟನೆಯಿಂದ 9 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಉಳಿದಂತೆ ಗಾಯಗೊಂಡವರನ್ನು ಆದ್ಯತೆ ಮೇಲೆ (ಗಂಭೀರ, ಸಾಮಾನ್ಯ ಗಾಯ, ಹೊರರೋಗಿ) 3 ವಿಭಾಗಗಳಾಗಿ ವಿಂಗಡಿಸಿ ರಿಲೀಫಿಂಗ್ ಕ್ಯಾಂಪ್‌ನಲ್ಲಿ ತಪಾಸಣೆ ನಡೆಸಿ ಝೀರೋ ಟ್ರಾಫಿಕ್ ಮೂಲಕ ಮಂಗಳೂರಿನ ನಾನಾ ಆಸ್ಪತ್ರೆಗಳಿಗೆ ರವಾನಿಸಲಾಯಿತು. ವಿಮಾನದಿಂದ ಹಾರಿ ಗುರುಪುರ ನದಿಗೆ ಬಿದ್ದವರನ್ನು ದೋಣಿಗಳ ಮೂಲಕ ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ಸಾಗಿಸಲಾಯಿತು.

ಕೆಂಜಾರು ಶ್ರೀದೇವಿ ಕಾಲೇಜಿನಲ್ಲಿ ಆಶ್ರಯ ಕೇಂದ್ರ ಮತ್ತು ತಾತ್ಕಾಲಿಕ ಶವಾಗಾರ ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಕಾರ್ಯಾಚರಣೆಗೆ ಸಂಬಂಧಿಸಿ ಜಿಲ್ಲಾಡಳಿತದಿಂದ ನಿಯೋಜನೆಗೊಂಡಿದ್ದ ಇನ್ಸಿಡೆಂಟ್ ಕಮಾಂಡರ್, ಮಂಗಳೂರು ಉಪ ವಿಭಾಗಾಧಿಕಾರಿ ಶ್ರೀಧರ್ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ದುರಂತದ ಅಣಕು ಕಾರ್ಯಾಚರಣೆ ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ. ಕಾರ್ಯಾಚರಣೆಗೆ ಸಂಬಂಧಿಸಿದ ನಾನಾ ವಿಭಾಗಗಳ ವರದಿ ಲಭ್ಯವಾದ ಬಳಿಕ ಯಾವ ರೀತಿ ಇನ್ನೂ ಸನ್ನದ್ಧವಾಗಿರಬಹುದು ಎನ್ನುವುದು ತಿಳಿದು ಬರಲಿದೆ ಎಂದರು.

ದಿಲ್ಲಿಯ ಎನ್‌ಡಿಎಂಎ ಅಧಿಕಾರಿಗಳಾದ ಬ್ರಿಗೇಡಿಯರ್ ರೂಪೇಂದ್ರ ಗುರಂಗ್, ಬ್ರಿಗೇಡಿಯರ್ ಕೃಷ್ಣಮೇಧಾ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಡಾ. ಶ್ರೀನಿಕೇತನ್, ಎಸಿಪಿ ಶ್ರೀಕಾಂತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮನ್ವಯಾಧಿಕಾರಿ ವಿಜಯ ಕುಮಾರ್ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

ರಕ್ಷಣಾ ತಂಡದಲ್ಲಿ 250ಕ್ಕೂ ಅಧಿಕ ಮಂದಿ

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ವಾಹನಗಳು, 6 ಆಂಬ್ಯುಲೆನ್ಸ್‌ಗಳು, ಆರೋಗ್ಯ ಇಲಾಖೆ ವಾಹನಗಳು ಭಾಗವಹಿಸಿದ್ದವು. ವಿಮಾನ ದುರಂತದಲ್ಲಿ ಗಾಯಗೊಂಡವರಿಗೆ ಕೂಡಲೇ ಟೆಂಟ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಜಿಲ್ಲಾ ಆರೋಗ್ಯ ಇಲಾಖೆ, ನಾನಾ ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳ ತಂಡ ಆಗಮಿಸಿತ್ತು. 60 ಮಂದಿ ಅಗ್ನಿಶಾಮಕ ದಳ, 30 ಮಂದಿ ಎನ್‌ಡಿಆರ್‌ಎಫ್, 25 ಮಂದಿ ಎಸ್‌ಡಿಆರ್‌ಎಫ್, 120 ಮಂದಿ ಪೊಲೀಸರು, 50 ಮಂದಿ ಸಿಐಎಸ್‌ಎಫ್, 30 ಮಂದಿ ಏವಿಯೇಷನ್ ಸೆಕ್ಯೂರಿಟಿ ಬೋರ್ಡ್ ಸೇರಿದಂತೆ 250ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಅಣಕು ಕಾರ್ಯಾಚರಣೆಗೆ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದ್ದು, ಬೆಳಗ್ಗೆ 6 ಗಂಟೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿತ್ತು. ಅಣಕು ಕಾರ್ಯಾಚರಣೆಗಾಗಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗೊಂಡ ಮುಖವರ್ಣಿಕೆ ಮಾಡಲಾಗಿತ್ತು. ವಿದ್ಯಾರ್ಥಿನಿ ಯೊಬ್ಬಳು ಈ ದೃಶ್ಯವನ್ನು ತೋರಿಸಲು ಅಮ್ಮನಿಗೆ ವಿಡಿಯೋ ಕರೆ ಮಾಡಿದ್ದು ತನ್ನ ಮಗಳ ರೂಪ ನೋಡಿ ಗಾಬರಿಗೊಂಡ ತಾಯಿ ಬಳಿಕ ಮಗಳು ಸಮಾಧಾನಪಡಿಸಿ ಬಳಿಕ ಅಣಕು ಕಾರ್ಯಾಚರಣೆ ಅಮ್ಮ ಎಂದು ಸಮಾಧಾನಪಡಿಸಿದರು.

ನಗರದ ಬಳ್ಳಕ ಕಾಲೇಜು, ಯೆನೆಪೋಯ ಕಾಲೇಜು, ಸ್ವಸ್ತಿಕ್ ಕಾಲೇಜು, ಗೋಕರ್ಣನಾಥ ಕಾಲೇಜು ಸೇರಿದಂತೆ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ನೂರಾರು ನಾಗರಿಕರು ಅಣಕು ಕಾರ್ಯಾಚರಣೆ ವೀಕ್ಷಿಸಿದರು

Mangaluru International Airport, in coordination with the Dakshina Kannada district administration and multiple emergency-response agencies, conducted an Integrated Mock Exercise on aircraft accident on Friday under the aegis of the National Disaster Management Authority (NDMA). The exercise simulated a major aircraft accident outside the airport boundary and tested the coordinated response to a complex emergency.

The simulated scenario involved a passenger aircraft developing an engine-related emergency shortly after take-off and crashing outside the airport boundary near the Gurupura river. The exercise tested response to multiple challenges including an aircraft fire, rescue of trapped occupants, passengers and debris in the river, mass-casualty management and evacuation of the injured.

The exercise activated emergency coordination mechanisms and tested the establishment of an incident command post and staging area. The operational response covered firefighting and rescue, water rescue, crowd and traffic management, casualty triage and evacuation, family assistance, media facilitation and procedures for managing fatalities. All casualties and circumstances depicted during the exercise were simulated.

The integrated mock exercise was designed to validate the emergency-management system through actual mobilisation and deployment of personnel and resources. A tabletop exercise on 26 November was held at the Airport in the run up to the mock exercise, where stakeholders discussed their roles, responsibilities and response procedures and identified areas requiring coordination ahead of the field exercise.

The exercise brought together more than 500 personnel from the airport operator, Airports Authority of India Air Traffic Control, more than 40 departments of Dakshina Kannada district administration, disaster-management authorities, police and traffic police, Karnataka State Fire and Emergency Services, National Disaster Response Force, State Disaster Response Force, Indian Red Cross Society, six major industries and other supporting agencies. Hospitals and medical-response teams were also integrated into the scenario to test the wider emergency-response network.

The integrated mock exercise was designed to validate the emergency-management system through actual mobilisation and deployment of personnel and resources. It followed a tabletop exercise on 26 November, where stakeholders discussed their roles, responsibilities and response procedures and identified areas requiring coordination ahead of the field exercise.

The exercise, mandated as per International Civil Aviation Organization and Directorate General of Civil Aviation regulations, provided an opportunity to assess communication and coordination between agencies, validate emergency procedures and identify operational gaps that could be addressed to further strengthen preparedness for a real aircraft emergency.

VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.