ಬಂಟ್ವಾಳ

12ರಂದು ಶಂಕರ ಪತ್ತಿನ ಸಹಕಾರ ಸಂಘ ನೂತನ ಕಟ್ಟಡಕ್ಕೆ ಸ್ಥಳಾಂತರ

ಬಂಟ್ವಾಳ: ಮೆಲ್ಕಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಸುಸಜ್ಜಿತ ನೂತನ ಕಟ್ಟಡಕ್ಕೆ ಅಕ್ಟೋಬರ್ 12ರಂದು ಸ್ಥಳಾಂತರಗೊಳ್ಳಲಿದೆ.

ಸಂಘದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ಇದೀಗ ಮೆಲ್ಕಾರ್ ಸರ್ವೀಸ್ ರಸ್ತೆಯ ಬಳಿಯೇ ಇರುವ ಸರಾ ಆರ್ಕೇಡ್ ನಲ್ಲಿರುವ ಪ್ರಥಮ ಮಹಡಿಗೆ ಸ್ಥಳಾಂತರಗೊಳ್ಳಲಿದೆ ಎಂದು ಮಾಹಿತಿ ನೀಡಿದ ಅವರು, ಪ್ರಧಾನ ಕಚೇರಿ ಉದ್ಘಾಟನೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ನೆರವೇರಿಸುವರು.

VNR GOLD

 ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ರಮಾನಾಥ ರೈ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಜೀವ ಪೂಜಾರಿ ಗುರುಕೃಪ, ರಾಜೇಂದ್ರ ಹೊಳ್ಳ, ಸಹಕಾರ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ. ಭಾಗವಹಿಸುವರು ಎಂದರು. ಸಂಘವು ಪ್ರಸಕ್ತ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ಸ್ವಂತ ಕಟ್ಟಡ ಹೊಂದುವ ಅಪೇಕ್ಷೆ ಹೊಂದಿದೆ. ಚಿನ್ನಾಭರಣಗಳಿಗೆ ಗರಿಷ್ಠ ಸಾಲ, ಕನಿಷ್ಠ ಬಡ್ಡಿ ಸಹಿತ ಭದ್ರತೆಯ ಆಧಾರದ ಮೇಲೆ ಸಾಲ ಸೌಲಭ್ಯವಿದ್ದು, ಉತ್ತಮ ವಸೂಲಾತಿ ದಾಖಲೆ ಹೊಂದಿದೆ ಎಂದರು.

ಜಾಹೀರಾತು

 ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಯಾನಂದ ಪೆರಾಜೆ, ನಿರ್ದೇಶಕರಾದ ರವೀಂದ್ರ ಕುಕ್ಕಾಜೆ, ವೃತ್ತಿಪರ ನಿರ್ದೇಶಕ ರಾಕೋಡಿ ಈಶ್ವರ ಭಟ್ ಮತ್ತು ಸಲಹಾ ಸಮಿತಿ ಸದಸ್ಯ ಕೃಷ್ಣ ಶರ್ಮಾ, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವ್ಯಾ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ದಕ್ಷಿಣ ಕನ್ನಡ ಜಿಲ್ಲೆ ಹೆದ್ದಾರಿ ಅಭಿವೃದ್ಧಿ ಕೆಲಸಗಳಿಗೆ ವೇಗ

| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)

1 day ago

ಕುಡಿಯುವ ನೀರು, ತ್ಯಾಜ್ಯ ಸಮಸ್ಯೆ ಇತ್ಯರ್ಥಕ್ಕೆ 15 ದಿನಗಳ ಗಡುವು

| ಬಂಟ್ವಾಳ ಪುರಸಭೆಯಲ್ಲಿ ಎಂಎಲ್ಎ ರಾಜೇಶ್ ನಾಯ್ಕ್, ಎಂಎಲ್ ಸಿ ಮಂಜುನಾಥ ಭಂಡಾರಿ ಮೀಟಿಂಗ್ (more…)

3 days ago