ಬಂಟ್ವಾಳ

ಎರಕಳ ಕೃಷ್ಣ ಸೋಮಯಾಜಿ ಅನನ್ಯ ಸಾಧಕ: ಪ್ರಕಾಶ ಕಾರಂತ

ಪರಿಶ್ರಮದ ಮೂಲಕ ಸ್ವಜೀವನವನ್ನು ರೂಪಿಸಿಕೊಂಡು  ಉನ್ನತ ಬದುಕನ್ನು ಬಾಳಿದ ನರಿಕೊಂಬಿನ ಎರಕಳ ಕೃಷ್ಣಸೋಮಯಾಜಿ ಯವರು ಕೃಷಿ ಹಾಗೂ ಧಾರ್ಮಿಕ ಕ್ಷೇತ್ರದ ಅನನ್ಯ ಸಾಧಕರು ಎಂದು ರೋಟರಿಕ್ಲಬ್ ನ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಕಾರಂತ ಅಭಿಪ್ರಾಯ ಪಟ್ಟರು.

ಬಿ.ಸಿ.ರೋಡಿನ ಗೂಡಿನಬಳಿಯಲ್ಲಿರುವ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ. ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎರಕಳ ಕೃಷ್ಣ ಸೋಮಯಾಜಿ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು

 ನರಿಕೊಂಬು ಗ್ರಾಮದ ಎರಕಳ ಕೃಷ್ಣ ಸೋಮಯಾಜಿ ತರಕಾರಿ ಹಾಗೂ ಬಟ್ಟೆ ವ್ಯಾಪಾರಿಯಾಗಿ ಪರಿಶ್ರಮದ ಬದುಕನ್ನು ಆರಂಭಿಸಿದರು.ಮುಂದೆ ನೂರಕ್ಕೂ ಅಧಿಕ ಎಕ್ರೆ ಕೃಷಿ ಭೂಮಿಯ ಮಾಲೀಕರಾದರು. ಅನೇಕರಿಗೆ ಕೃಷಿಬದುಕನ್ನು ರೂಪಿಸಿಕೊಟ್ಟರು ಹಾಗೂ ಧಾರ್ಮಿಕ ಹಾಗು ಶೈಕ್ಷಣಿಕ ಕ್ಷೇತ್ರಗಳಲ್ಲಿ  ಮಾದರಿ ಎನಿಸುವ ಸೇವೆಗಳನ್ನು ಮಾಡಿದರು ಎಂದು ಅವರು ಸ್ಮರಿಸಿಕೊಂಡರು.

ಜಾಹೀರಾತು

ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ  ಪ್ರಾಚಾರ್ಯ ಯೂಸುಫ್ ವಿಟ್ಲ ಅವರು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಗಳನ್ನು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ವಹಿಸಿದ್ದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ್, ಬಂಟ್ವಾಳ ರೈತರ ಸಲಹಾ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದರು. ಕಾಲೇಜಿನ  ಉಪನ್ಯಾಸಕ ಇರ್ಷಾದ್ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕ ದಾಮೋದರ ರಾಮಕುಂಜ ನಿರೂಪಿಸಿದರು. ಕನ್ನಡ ಉಪನ್ಯಾಕಿ ಪ್ರತಿಭಾ ಧನ್ಯವಾದ ಸಲ್ಲಿಸಿದರು.

VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.