ಕಲ್ಲಡ್ಕ ಪೂರ್ಲಿಪ್ಪಾಡಿಯ ಸುರಕ್ಷಾ ಸಂಗಮ ವತಿಯಿಂದ ಕಲ್ಲಡ್ಕ ಮರಾಠಿ ಭವನದಲ್ಲಿ ಗೌಜಿ ಗಮ್ಮತ್ತ್ ಎಂಬ ಕಾರ್ಯಕ್ರಮ ನಡೆಯಿತು.

ಈ ವೇಳೆ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು ಮಾತನಾಡಿ ಸಂಸ್ಕಾರಯುತ ಜೀವನ ಕಲಿಸಲು ಇಂಥ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಯಪ್ರಶಾಂತ್ ವಹಿಸಿದ್ದರು. ದೈವ ಚಾಕರಿದಾರ ಯೋಗೀಶ್ ಸುವರ್ಣ, ಗ್ರಾಮ ಗೌರವಕ್ಕೆ ಪಾತ್ರರಾದ ನಾಗರತ್ನ ಪೂರ್ಲಿಪಾಡಿ, 25 ಬಾರಿ ರಕ್ತದಾನ ಮಾಡಿದ ರಾಜೇಶ್ ಬಿ ಆರ್ ನಗರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಬಿಜೆಪಿ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಹೊಸಕಟ್ಟ ಕನ್ಸ್ಟಕ್ಷನ್ ಮಾಲಕ ಚಿತ್ರಂಜನ್ ಹೊಸಕಟ್ಟ, ಕೃಷಿಕ ಜಯನಂದ ಏಳ್ತಿಮಾರು, ಆರ್ ಕೆ ಡ್ಯಾನ್ಸ್ ಅಕಾಡೆಮಿ ವಿಟ್ಲದ ರಾಜೇಶ್ ವಿಟ್ಲ, ಪ್ರಗತಿಪರ ಕೃಷಿಕ ಜನಾರ್ಧನ ಪೂಜಾರಿ ಗೋಳಿಮಾರ್, ಕೆ ಎಸ್ ಬೇಕರಿ ಮಾಲೀಕ ನವಾಜ್, ಕನ್ನಡ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ಆರಾಧ್ಯ ಪ್ರಾಥಿಸಿ, ಸಂಘದ ಗೌರವ ಸಲಹೆಗಾರ ಯತಿನ್ ಕುಮಾರ್ ಏಳ್ತೀಮಾರ್ ಸ್ವಾಗತಿಸಿದರು. ಸಂಘದ ಗೌರವ ಸಲಹೆಗಾರ ವೆಂಕಟ್ರಾಯ ಪ್ರಭು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರಕ್ಷಾ ಮಹಿಳಾ ಮಂಡಳಿಯ ಅಧ್ಯಕ್ಷ ಉಮಾವತಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಪೂರ್ಲಿಪ್ಪಾಡಿ ಸುರಕ್ಷಾ ಸಂಗಮದಿಂದ ಗೌಜಿ ಗಮ್ಮತ್ತ್"