ಪುತ್ತೂರು: ಜೆಸಿಐ ವಲಯ 15ರ ಸಾಧನಾ ಶ್ರೀ ಪ್ರಶಸ್ತಿಗೆ ಟಿವಿ ಕ್ಲಿನಿಕ್ ಮಾಲಕ, ಪುತ್ತೂರು ಜೆಸಿಐ ಸದಸ್ಯ ಸತ್ಯಶಂಕರ್ ಆಯ್ಕೆಯಾಗಿದ್ದಾರೆ.
ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಆ. 23ರಂದು ನಡೆಯುವ ಮೃದಿನಿ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಐಟಿಸಿ ಡಿಪ್ಲೋಮಾ ವ್ಯಾಸಂಗದ ಬಳಿಕ 2000ದಲ್ಲಿ ಟೆಲಿವಿಷನ್ ಕ್ಷೇತ್ರಕ್ಕೆ ಕಾಲಿಡುತ್ತಾರೆ. ತಾಂತ್ರಿಕ ನೈಪುಣ್ಯ, ಕಠಿಣ ಪರಿಶ್ರಮ ಹಾಗೂ ಉದ್ಯಮಶೀಲತಾ ದೃಷ್ಟಿಕೋನದಿಂದ 2010ರಲ್ಲಿ ಟಿವಿ ಕ್ಲಿನಿಕ್ ಆರಂಭಿಸಿದರು. 2008ರಲ್ಲಿ ಕೇಶವ ಪ್ರಸಾದ್ ಮುಳಿಯ ಹಾಗೂ ತನ್ನ ಸಹೋದರ ಪಶುಪತಿ ಶರ್ಮಾ ಅವರ ಪ್ರೋತ್ಸಾಹದಿಂದ ಜೆಸಿಐ ಚಳವಳಿಗೆ ಸೇರಿಕೊಂಡರು. ಇವರು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಸದಸ್ಯರೂ ಹೌದು.
ವೃತ್ತಿ ಹಾಗೂ ಸಾಮಾಜಿಕವಾಗಿ ಹಲವಾಗಿ ಸಾಧನೆಗಳಿಗೆ ಸಾಕ್ಷಿಯಾಗಿರುವ ಸತ್ಯಶಂಕರ್ ಅವರು ಜೆಸಿಐ ಫೌಂಡೇಷನ್’ಗೆ ದೇಣಿಗೆಯನ್ನು ನೀಡಿ ಜೆ.ಎಫ್.ಡಿ. ಪದವಿ ಗಳಿಸಿದ್ದಾರೆ. ಇವರು ಕುಳಮರ್ವ ವೆಂಕಟರಮಣ ಭಟ್ ಹಾಗೂ ರತ್ನಾವತಿ ದಂಪತಿ ಪುತ್ರ. ಸತ್ಯಶಂಕರ್ ಅವರ ಸಾಧನೆಗೆ ಅವರ ಪತ್ನಿ ಸ್ಮಿತಾ ಶಂಕರ್ ಹೆಗಲು ನೀಡಿದ್ದಾರೆ.