ಬಂಟ್ವಾಳ

ಬಿ.ಸಿ.ರೋಡ್ ಅಜ್ಜಿಬೆಟ್ಟು ಹೈಸ್ಕೂಲ್, ಬಿ.ಮೂಡ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಾಧನೆ

ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಸರಕಾರಿ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಮತ್ತು ಕೋಡ್ ಕ್ರಾಫ್ಟ್ ಟೆಕ್ನಾಲಜಿಸ್ ಸಹಯೋಗದಲ್ಲಿ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ,ಉತ್ತಮ ಬದುಕಿಗಾಗಿ ವಿಜ್ಞಾನ ಉದ್ದೇಶದೊಂದಿಗೆ ನಡೆಯಿತು.

VNR GOLD

ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜ್ಞಾನದ ಮಾಡೆಲ್ ಗಳನ್ನು ಮಾಡಿ ಭಾಗವಹಿಸಿದ್ದರು.

ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆರನೇ ತರಗತಿಯ ಯಜ್ಞಶ್ರೀ, ದ್ವಿತೀಯ ಸ್ಥಾನವನ್ನು ಐದನೇ ತರಗತಿಯ ವಿಹಾನ್ ರೋಸಾರಿಯೋ, ತೃತೀಯ ಸ್ಥಾನವನ್ನು ಏಳನೇ ತರಗತಿಯ ನಿಶ್ಮಿತ್  ಮತ್ತು ವಿಹಾನ್ ಪಡೆದರು.

ಜಾಹೀರಾತು
OPTIC WORLD

ಎರಡನೇ ತರಗತಿಯ ಸ್ವಾತಿ, ತೀರ್ಥನ್, ಮೂರನೇ ತರಗತಿಯ ನಿಹಾಲ್, 6ನೇ ತರಗತಿಯ ಸುಮಂತ್ ಮತ್ತು ಋತ್ವಿ ಭಾಗವಹಿಸಿದ ಇತರರು.

ಪ್ರೌಢಶಾಲೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು  ಆರ್ಯ ಮತ್ತು ರಾಘವೇಂದ್ರ,  ದ್ವಿತೀಯ ಸ್ಥಾನವನ್ನು  ಕೀರ್ತನ್ ಮತ್ತು ದೇವಿತ್,  ತೃತೀಯ ಸ್ಥಾನವನ್ನು ದನಿ ಮತ್ತು ವಿನೀತ್ ಪಡೆದರು. ಕೃತೇಶ್,ನಿರೀಕ್ಷ್, ಪ್ರಜ್ವಲ್, ವೈಭವ್, ಶ್ರೀಸಾಯಿ ಮತ್ತು ಲಾವಣ್ಯ ಭಾಗವಹಿಸಿದ ಇತರರು.

ತೀರ್ಪುಗಾರರಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ವಯಂ ಸೇವಕರು ಮತ್ತು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಶ್ರೀವತ್ಸ, ನಿಶಾಂತ್ , ಮೇಘ, ಶ್ರೀಶ್ರಾವ್ಯ ಭಾಗವಹಿಸಿದ್ದರು.  ವಿಜೇತರಿಗೆ ಕ್ರಮವಾಗಿ 1000, 750, 500 ರೂ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಬಹುಮಾನ ವಿತರಣೆ ಸಂದರ್ಭ ಎರಡೂ ಶಾಲೆಗಳ ಶಿಕ್ಷಕರು ಹಾಜರಿದ್ದರು

D.SHIVA BHAT JWELLERS
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.