ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪು ಮಾಡಿಕೊಂಡು, ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಜೀವಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಶಾಲೆಗೆ ಪದ್ಮಿನಿ ದೇವಣ್ಣ ಬಲ್ಲಾಳ್ ಬಾಗ್, ಜಯಂತಿ ಗಂಗಾಧರ್, ಪ್ರೇಮಾ ಜನಾರ್ದನ್, ಕುಸುಮಾ ಕೈಕುಂಜೆ, ನಮಿತಾ ಉಮೇಶ್ ಮತ್ತು ಸೃಜನ್ ಬಿ.ಎಲ್. ಅವರು ನೀಡಿದ ಬ್ಯಾಂಡ್ ಸೆಟ್ ಅನ್ನು ಹಸ್ತಾಂತರಿಸಲಾಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿನೋದಾ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ರೋಟರಿ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ, ಸ್ನೇಹಾಂಜಲಿ ಸೇವಾ ಸಂಘ ಅಧ್ಯಕ್ಷ ಜಯಂತ್ ಅಗ್ರಬೈಲ್, ಕಾರ್ಯದರ್ಶಿ ಆಶಿಶ್ ಅಜ್ಜಿಬೆಟ್ಟು, ಪದಾಧಿಕಾರಿಗಳಾದ ಲೋಹಿತ್ ಅಜ್ಜಿಬೆಟ್ಟು, ಪ್ರಶಾಂತ್ ಅಜ್ಜಿಬೆಟ್ಟು, ಗಣೇಶ್ , ಎಸ್.ಡಿ.ಎಂ.ಸಿ. ಪೂರ್ವಾಧ್ಯಕ್ಷ ಹರೀಶ್ ಮಾಂಬಾಡಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಶಶಿಧರ್, ಸದಸ್ಯರಾದ ಶಿವಮೂರ್ತಿ, ಜಯಂತಿ, ಕವಿತಾ, ಸಾವಿತ್ರಿ, ಶಾಲಾ ನಾಯಕಿ ಸಂಜನಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹರ್ಷಿಣಿ, ಸಮರ್ಥ್, ಯಶವಂತ್, ತೃಪ್ತಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದರು.
ಕಂಪ್ಯೂಟರ್ ಶಿಕ್ಷಕ ಶಿವಮೂರ್ತಿ ಮಾರ್ಗದರ್ಶನದಲ್ಲಿ ಶಾಲೆಯ ಲೇಝಿಮ್ ತಂಡದ ವತಿಯಿಂದ ದೇಶಭಕ್ತಿ ನೃತ್ಯ ಪ್ರದರ್ಶನಗೊಂಡಿತು. ಸಹಶಿಕ್ಷಕಿ ಐರಿನ್, ಗೌರವ ಶಿಕ್ಷಕಿಯರಾದ ನಿಶ್ಮಿತಾ, ಪೂರ್ಣಿಮಾ, ಲಾವಣ್ಯ ಮತ್ತು ದಿವ್ಯಾ ಸಹಕರಿಸಿದರು. ಗುರುದತ್ತ ಹೆಗ್ಡೆ ಪ್ರಾಯೋಜಕತ್ವದಲ್ಲಿ ಉಪಾಹಾರ ವ್ಯವಸ್ಥೆ, ಸ್ನೇಹಾಂಜಲಿ ಸೇವಾ ಸಂಘದ ವತಿಯಿಂದ ಸಿಹಿತಿಂಡಿ ಒದಗಿಸಲಾಯಿತು.
ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಕೆ. ಸ್ವಾಗತಿಸಿದರು. ಸಹಶಿಕ್ಷಕಿ ತಾಹಿರಾ ವಂದಿಸಿದರು. ನಶಾಮುಕ್ತ ಭಾರತ ಪ್ರತಿಜ್ಞೆ ಸಹಶಿಕ್ಷಕಿ ವಿಮಲಾ ಬೋಧಿಸಿದರು. ಸಹಶಿಕ್ಷಕಿ ಸುಶೀಲಾ ಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು.