ಬಂಟ್ವಾಳ ತಾಲೂಕಿನ ಬೋಗೋಡಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬೋಳಂಗಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಪುರಸಭೆ ನಿಕಟಪೂರ್ವ ಸದಸ್ಯ ಅಬುಬಕ್ಕರ್ ಸಿದ್ದೀಕ್ ಧ್ವಜಾರೋಹಣ ನೆರವೇರಿಸಿದರು. ಬೋಗೋಡಿ ಶಾಲೆಯಲ್ಲಿ ಶಿಕ್ಷಕಿ ಲವೀನಾ, ವಿನ್ಫ್ರೆಡ್, ಪ್ರಮುಖರಾದ ಅಬುಬಕ್ಕರ್ ಮೆಲ್ಕಾರ್, ಆರೀಫ್ ಮೆಲ್ಕಾರ್, ಝಕಾರಿಯ ಬೋಗೋಡಿ, ಅಬೀದ್ ಬೋಗೋಡಿ, ವಾಲ್ವಿನ್ ಡಿಸೋಜ ಮತ್ತಿತರರು ಇದ್ದರು.
ಬೋಳಂಗಡಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿ ಅಲೀಸಾ, ಪ್ರಮುಖರಾದ ಯಶೋಧಾ ಬೋಳಂಗಡಿ, ಆರೀಫ್ ಮೆಲ್ಕಾರ್, ಸತೀಶ್ ಸಾಲ್ಯಾನ್ ಮೆಲ್ಕಾರ್, ಪುರುಷೋತ್ತಮ ಬೋಳಂಗಡಿ, ಕವಿತಾ ಮತ್ತಿತರರು ಹಾಜರಿದ್ದರು.