ಬಂಟ್ವಾಳ: ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ರಾಷ್ಟ್ರೀಯ ಮಂಡಳಿಯ ಕರೆಯಂತೆ, ಅಕ್ಟೋಬರ್ 2ರ ಗಾಂಧಿ ಜಯಂತಿಯನ್ನು ‘ಕೋಮು ಸೌಹಾರ್ದ ದಿನ’ವಾಗಿ ಆಚರಿಸಲಾಯಿತು. ಇದರ ಅಂಗವಾಗಿ ಬಂಟ್ವಾಳದಲ್ಲಿ ವಿಶೇಷ ಸಭೆ ನಡೆಯಿತು.
ಹಿರಿಯ ಕಾರ್ಮಿಕ ಮುಖಂಡ ಭೋಜ ಕರಂಬೇರ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಇಡೀ ಜಗತ್ತಿಗೆ ಪ್ರೇರಣೆಯಾಗಿದ್ದರು ಎಂದರು.
ಭಾರತೀಯ ಮಹಿಳಾ ಒಕ್ಕೂಟದ ನಾಯಕಿ ಭಾರತಿ ಪ್ರಶಾಂತ್ ಹಾಗೂ ಅಖಿಲ ಭಾರತ ಯುವಜನ ಒಕ್ಕೂಟದ ಮುಖಂಡ ಪ್ರೇಮನಾಥ್ ಕೆ. ಮಾತನಾಡಿದರು. ಸಮಾನ ಮನಸ್ಕ ಸಂಘಟನೆಯ ಮುಖಂಡ ಮ್ಯಾಕ್ಸಿಮ್ ಡಿಸೋಜಾ ಉಪಸ್ಥಿತರಿದ್ದರು.
ಸಿಪಿಐ ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಫ್‌ಐಡಬ್ಲ್ಯೂ ನಾಯಕಿ ಶಮಿತಾ ವಂದಿಸಿದರು.
| ಬಂಟ್ವಾಳದ 51 ಗ್ರಾ.ಪಂ.ಗಳ ತ್ಯಾಜ್ಯ ಸಂಸ್ಕರಣೆ | ಗೋಳ್ತಮಜಲು ಗ್ರಾಮದ ಚಿಮಿಣಿಗುರಿಯಲ್ಲಿ ಕಾರ್ಯ (more…)