ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜಿನಾಮೆ ನೀಡಬೇಕು, ಭಾರತ ಚುನಾವಣಾ ಆಯೋಗದ ಸ್ವಾಯತ್ತತೆ ರಕ್ಷಿಸಿ ಎಸ್.ಐ.ಆರ್ ನಿಲ್ಲಿಸಿ, ಕೈ ಬಿಟ್ಟ ಮತದಾರ ರನ್ನು ಪುನ್ಃ ಸೇರಿಸಿ, ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಬದಲಾಗಬೇಕೆಂದು ಒತ್ತಾಯಿಸಿ ದೇಶದಾದ್ಯಂತ ಎಡ ಪಕ್ಷಗಳಿಂದ ಕರೆ ನೀಡಿರುವ ಪ್ರತಿಭಟನೆಯ ಭಾಗವಾಗಿ ಭಾರತ ಕಮ್ಯೂನಿಸ್ಟ್‌ಪಕ್ಷ ( ಮಾರ್ಕ್ಸ್ ವಾದಿ,ಲೆನಿನ್ ವಾದಿ) ಲಿಬರೇಶನ್. ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಶುಕ್ರವಾರ .ಬಿಸಿ. ರೋಡ್ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಎಸ್.ಐ.ಆರ್ ಪ್ರಕ್ರಿಯೆಯು ಅವೈಜ್ಞಾನಿಕವಾಗಿದ್ದು ದಾಖಲಾತಿಯ ಹೆಸರಿನಲ್ಲಿ ಬಡವರನ್ನು ,ದಲಿತ,ಆದಿವಾಸಿ ಅಲ್ಪಸಂಖ್ಯಾತ ರನ್ನು ಚುನಾವಣಾ ಪ್ರಕ್ರಿಯಿಂದಲೇ ದೂರ ಮಾಡುವ ಷಡ್ಯಂತ್ರ ಎಂದು ಆರೋಪಿಸಿದರು.
ಸಿ.ಪಿ.ಐ.ಎಂ.ಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಮೋಹನ್ ಕೆ.ಇ ಮಾತನಾಡಿ ಎಸ್.ಐ.ಆರ್ ವಿರುದ್ಧ ಇಂದು ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ಮೌನವಾಗಿದೆ ಎಂದರು.
ಆರ್.ವೈ.ಎ ರಾಜ್ಯ ಸಹ ಸಂಚಾಲಕರಾದ ಮಹಮ್ಮದ್ ಲುಕ್ಮಾನ್ ಕೆ.ಎಂ ಮಾತನಾಡಿ ಸ್ವತಂತ್ರ ವಾಗಿ ಕಾರ್ಯಚರಿಸಬೇಕಿದ್ದ ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈ ಗೊಂಬೆಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ .ಆರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆ ಯ ನೇತ್ರತ್ವ ವನ್ನು ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಜಿಲ್ಲಾ ಸಮಿತಿ ಸದಸ್ಯರಾದ ಸಜೇಶ್ ವಿಟ್ಲ, ಮಹಮ್ಮದ್ ಮುಂಝಿರ್, ಸುಹೈಲ್, ತಾಲೂಕು ಸಮಿತಿ ಸದಸ್ಯರಾದ ಡೆನ್ನಿಸ್ ಡಿ.ಸೋಜ, ವಸಂತ ಗಟ್ಟಿ, ಜಾನ್ ಡಿ ಸೋಜ , ಮಹಮ್ಮದ್ ಹಪೀಝ್.ಎ.ಕೆ, ರಾಜೇಶ್ ಶೆಟ್ಟಿ, ಕುಂಞಪ್ಪ ಮೂಲ್ಯ, ಎ.ಐ.ಸಿ.ಸಿ.ಟಿ.ಯು ಮುಖಂಡರಾದ ಶೌಕತ್ ಆಲಿ ಖಾನ್, ಅಚ್ಯುತ ಕಟ್ಟೆ, ಮಾರ್ಟಿನ್ ಬಂಟ್ವಾಳ ಮುಂತಾದವರು ವಹಿಸಿದ್ದರು.
| ಬಂಟ್ವಾಳದ 51 ಗ್ರಾ.ಪಂ.ಗಳ ತ್ಯಾಜ್ಯ ಸಂಸ್ಕರಣೆ | ಗೋಳ್ತಮಜಲು ಗ್ರಾಮದ ಚಿಮಿಣಿಗುರಿಯಲ್ಲಿ ಕಾರ್ಯ (more…)