ಬಂಟ್ವಾಳ: ಕಲ್ಲಡ್ಕದಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಶಾರದಾ ಉತ್ಸವ ಸಮಿತಿ ನೇತೃತ್ವದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೊಳಕಿರ್ದ ತುಡರ್, ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಮತ್ತು ತ್ರಿಶೂಲ್ ಫ್ರೆಂಡ್ಸ್ ರಾಯಪ್ಪಕೋಡಿ ಸಹಕಾರದೊಂದಿಗೆ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಸಹಬಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಡಾ.ಮನೋಜ್ ಉದ್ಘಾಟಿಸಿದರು. ಡಾ. ಸುಕೇಶ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಶಾಂತ್ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಶಾರದಾ ಉತ್ಸವ ಸಮಿತಿ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಕೊಳಕಿರ್ದ ತುಡರ್ ಉಪಾಧ್ಯಕ್ಷರಾದ ಡಾ ನವ್ಯ ಪ್ರಶಾಂತ್. ಜಗದೀಶ್ ಕೊಳಕಿರ್, ಸುರಕ್ಷಾ ಸಂಗಮದ ಗೌರವಾಧ್ಯಕ್ಷ ವೆಂಕಟ್ರಾಯ ಪ್ರಭು. .. ತ್ರಿಶುಲ್ ಫ್ರೆಂಡ್ಸ್ ನ ಗೌರವ ಸಲಹೆಗಾರರಾದ ಜಗದೀಶ್ ಬಜ್ಜರ್, ಗೌರವ ಅಧ್ಯಕ್ಷರಾದ ಗೋಪಾಲ್ ಕಲ್ಲಡ್ಕ ಉಪಸ್ಥಿತರಿದ್ದರು.
ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಯತೀನ್ ಕುಮಾರ್ ಪಂಚವಟಿ ಸ್ವಾಗತಿಸಿದರು, ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 125 ಜನರ ಭಾಗವಹಿಸಿದ್ದು ಅದರಲ್ಲಿ ಅರ್ಹ 95 ಜನರಿಂದ ರಕ್ತ ಪಡೆಯಲಾಯಿತು