ಲೊರೆಟ್ಟೊ ಚರ್ಚ್ ಪಾಲನಾ ಪರಿಷದ್, ಹಣಕಾಸು ಹಾಗೂ ಆಯೋಗಗಳ ಸದಸ್ಯರಿಗೆ ತರಬೇತಿ ಶಿಬಿರ ಏರ್ಪಡಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಜುಡಿಷಿಯಲ್ ವಿಗಾರ್ ಹಾಗೂ ಪಾಲನಾ ಪರಿಷತ್ ಸಂಯೋಜಕರಾಗಿರುವ ವಂ.ನವೀನ್ ಪಿಂಟೊ ತರಬೇತಿ ಶಿಬಿರ ನಡೆಸಿಕೊಟ್ಟರು.
ಚರ್ಚ್ ಧರ್ಮ ಗುರುಗಳ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವುದರೊಂದಿಗೆ ಆರಂಭವಾದ ಈ ಕಾರ್ಯಕ್ರಮ ವೇದಿಕೆಯಲ್ಲಿ ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನ ಪ್ರಿನ್ಸಿಪಾಲ್ ವಂ. ಜೇಸನ್ ಮೊನಿಸ್, ನಿರ್ಮಲ ಕಾನ್ವೆಂಟ್ ನ ಸೂಪಿರಿಯರ್ ಭಗಿನಿ ಇಡೋಲಿಸ ರೊಡ್ರಿಗಸ್, ಪಾಲನಾ ಪರಿಷದ್ ಉಪಾಧ್ಯಕ್ಷರಾದ ಐಸಾಕ್ ವಾಸ್ ಉಪಸ್ಥಿತರಿದ್ದರು
.ಪಾಲನಾ ಪರಿಷದ್ ಕಾರ್ಯದರ್ಶ ಆಲ್ವಿನ್ ಪಿಂಟೊ ಸ್ವಾಗತಿಸಿದರು. ಆಯೋಗದ ಸಂಯೋಜಕರಾದ ಸಚಿನ್ ನೊರೊನ್ಹಾ ವಂದಿಸಿದರು. ಶೈಲಾ ಬರ್ಬೋಜಾ ಕಾರ್ಯಕ್ರಮ ನಿರೂಪಿಸಿದರು.