ಕಲ್ಲಡ್ಕ ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ 56.74 ಲಕ್ಷ ರೂ ನಿವ್ವಳ ಲಾಭ
ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಸುಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ‘ಶ್ರೀರಾಮ ಸೌಹಾರ್ದ ಸಹಕಾರಿ ಸಂಘ ನಿಯಮಿತ’ದ 10ನೇ ವರ್ಷದ ವಾರ್ಷಿಕ ಮಹಾಸಭೆ ನಡೆಯಿತುಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸದಸ್ಯರ ಸಕ್ರಿಯ ವ್ಯವಹಾರವು ಸಂಸ್ಥೆ ಹಾಗೂ ಪ್ರದೇಶದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ನಿರ್ದೇಶಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.
ಸಂಸ್ಥೆಯಅಭಿವೃದ್ಧಿಹಾಗೂಪ್ರಗತಿಯವಿವರಗಳನ್ನು ಅಧ್ಯಕ್ಷ ಸುಜಿತ್ ಕುಮಾರ್ ನೀಡಿದರು.
2025-26ನೇ ಆರ್ಥಿಕ ಸಾಲಿನಲ್ಲಿ ಸಂಸ್ಥೆಯು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳು ಹೀಗಿವೆ:
ಜಾಹೀರಾತು
ಸದಸ್ಯತ್ವಮತ್ತುಪಾಲುಬಂಡವಾಳ: ಮಾರ್ಚ್ ಅಂತ್ಯದ ವೇಳೆಗೆ ಸಂಘವು 4,108 ಸದಸ್ಯರನ್ನು ಹೊಂದಿದ್ದು, ಒಟ್ಟು ರೂ 43,11,900/- ಪಾಲು ಬಂಡವಾಳ ಸಂಗ್ರಹಿಸಿದೆ.
ದುಡಿಯುವಬಂಡವಾಳ: ಸಂಸ್ಥೆಯು ರೂ 19,77,70,479/- ದುಡಿಯುವ ಬಂಡವಾಳವನ್ನು ಹೊಂದಿದೆ.
ಠೇವಣಿಸಂಗ್ರಹ: ಪ್ರಸಕ್ತ ವರ್ಷದಲ್ಲಿ ರೂ 17,71,96,109.30/- ಠೇವಣಿ ಸಂಗ್ರಹಿಸಲಾಗಿದ್ದು, ಕಳೆದ ಸಾಲಿಗಿಂತ 9.8ಶೇಪ್ರಗತಿ ದಾಖಲಿಸಿದೆ.
ಸಾಲವಿತರಣೆ: ಒಟ್ಟು ರೂ14,49,12,548/- ಸಾಲ ನೀಡಲಾಗಿದ್ದು, ಕಳೆದ ವರ್ಷಕ್ಕಿಂತ 6ಶೇಏರಿಕೆ ಕಂಡಿದೆ.
ಸುರಕ್ಷಿತಹೂಡಿಕೆ: ಸಂಸ್ಥೆಯ ಉಳಿಕೆ ಹಣ ರೂ 5,85,62,887/- ಅನ್ನು ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಾವಳಿಗಳ ಅನ್ವಯ ಇತರೆ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ.
ಲಾಭಮತ್ತುಡಿವಿಡೆಂಟ್: ಸಂಘವು ಈ ಆರ್ಥಿಕ ವರ್ಷದಲ್ಲಿ ರೂ56,74,768/-ನಿವ್ವಳಲಾಭ ಗಳಿಸಿದ್ದು, ಕಳೆದ ಬಾರಿಗಿಂತ 13.6ಶೇಪ್ರಗತಿ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ 12.5ಶೇಡಿವಿಡೆಂಟ್ ಘೋಷಿಸಲಾಯಿತು.
ಸಹಕಾರಿ ಸಂಘವು ತನ್ನ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಬಡ ವಿದ್ಯಾರ್ಥಿಗಳ ನಿಧಿಯಿಂದ ಶೈಕ್ಷಣಿಕ ಸಹಾಯಧನ ವಿತರಿಸಿತು:
ಸಮವಸ್ತ್ರನೆರವು: ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸಮವಸ್ತ್ರ ಖರೀದಿಗೆ ರೂ12,31,756/- ವಿತರಿಸಲಾಯಿತು.
ವಾಹನವೆಚ್ಚದಸಹಾಯ: 74 ಬಡ ವಿದ್ಯಾರ್ಥಿಗಳ ಶಾಲಾ ಬಸ್ ಪ್ರಯಾಣ ವೆಚ್ಚಕ್ಕಾಗಿ ರೂ7,00,000/- ಗಳ ನೆರವು ನೀಡಲಾಯಿತು.
ಪರಿಸರ ಜಾಗೃತಿಯ ಸಂಕೇತವಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾಸದಸ್ಯರುಗಳಿಗೆಹಲಸಿನಗಿಡಗಳನ್ನುವಿತರಿಸಲಾಯಿತು. ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರ್ಷಿಕ ವರದಿ ಮಂಡಿಸಿದರು
ಪ್ರಮುಖರಉಪಸ್ಥಿತಿ: ಅನ್ಯ ಸಹಕಾರಿ ಕ್ಷೇತ್ರದ ಅಧ್ಯಕ್ಷರುಗಳಾದ ಪದ್ಮನಾಭ ಕೊಟ್ಟಾರಿ, ಸುಧಾಕರ ರೈ ಬೋಳಂತೂರು, ರವೀಂದ್ರ ಕಂಬಳಿ, ನಾಗೇಶ ಕಲ್ಲಡ್ಕ, ವಿಟ್ಲ ಪಡ್ನೂರಿನ ಗೋಪಾಲಕೃಷ್ಣ ಭಟ್, ಲೋಕಾನಂದ ಪೂಜಾರಿ ಮತ್ತು ಗೋವರ್ಧನ್ ವಿಟ್ಲ ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯನಿರ್ದೇಶಕರು: ನಾರಾಯಣ ಸೋಮಯಾಜಿ, ವಸಂತ ಮಾಧವ, ನಾರಾಯಣ ಶೆಟ್ಟಿ, ವಸಂತ ಬಲ್ಲಾಳ್, ಕೃಷ್ಣಪ್ರಸಾದ್ ಕೆ.ಎನ್., ರವಿರಾಜ್ ಕಣಂತೂರು, ಸತೀಶ್ ಕುಮಾರ್ ಶಿವಗಿರಿ, ನಾಗರಾಜ್ ಕೆ.ಎಸ್. ಹಾಗೂ ಮಲ್ಲಿಕಾ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.
ನಿರ್ದೇಶಕರಾದ ಕುಶಾಲಪ್ಪಅಮ್ಟೂರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಅಜಿತ್ಎಮ್. ಧನ್ಯವಾದ ಸಮರ್ಪಿಸಿದರು.
ಜಾಹೀರಾತು
Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.