ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ರೂ 572 ಕೋಟಿಗಳ ಬೃಹತ್ ವ್ಯವಹಾರ ನಡೆಸಿ, ರೂ 1,94,77,637.47 ನಿವ್ವಳ ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ಗ್ರೇಡ್ ಕಾಯ್ದುಕೊಂಡಿರುವ ಸಂಘವು ತನ್ನ ಸದಸ್ಯರಿಗೆ ಶೇ. 12ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ಪ್ರಕಟಿಸಿದ್ದಾರೆ.
ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
2014ರ ಏಪ್ರಿಲ್ 2ರಂದು 5 ಗ್ರಾಮಗಳ ಕಾರ್ಯವ್ಯಾಪ್ತಿಯೊಂದಿಗೆ ಆರಂಭಗೊಂಡ ಸಂಘವು 12 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ 13ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಗೋಳ್ತಮಜಲು, ಅಮ್ಟೂರು, ಬಾಳ್ತಿಲ, ವೀರಕಂಭ ಹಾಗೂ ಬೋಳಂತೂರು ಗ್ರಾಮಗಳಲ್ಲಿ ಸಂಘದ ಕಾರ್ಯವ್ಯಾಪ್ತಿ ಇದ್ದು, ಪ್ರಸ್ತುತ ಕಲ್ಲಡ್ಕ, ವೀರಕಂಭ, ಬೋಳಂತೂರು ಮತ್ತು ಅಮ್ಟೂರುಗಳಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ವರದಿ ವರ್ಷದಲ್ಲಿ 191 ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ.
ಸಂಘವು ವರದಿ ವರ್ಷದಲ್ಲಿ ಒಟ್ಟು 9,047 ಸದಸ್ಯರಿಗೆರೂ 99.29 ಕೋಟಿ ಸಾಲ ವಿತರಿಸಿದೆ:
| ಯೋಜನೆ / ನೆರವು | ಫಲಾನುಭವಿಗಳು | ವಿತರಿಸಿದ ಮೊತ್ತ |
| ವಿಶೇಷ ಆರೋಗ್ಯ ನೆರವು | 59 ಸದಸ್ಯರು ಹಾಗೂ ಅವಲಂಬಿತರು | ರೂ 9.71 ಲಕ್ಷ |
| ಭಾಗ್ಯನಿಧಿ ಹಾಗೂ ಕಲ್ಯಾಣ ನಿಧಿ | ಮೃತ ಸದಸ್ಯರ 25 ವಾರಸುದಾರರು | ರೂ 4.55 ಲಕ್ಷ |
| ಶೈಕ್ಷಣಿಕ ಪ್ರೋತ್ಸಾಹಧನ | SSLC/PUC ಅತ್ಯಧಿಕ ಅಂಕಗಳಿಸಿದ 51 ವಿದ್ಯಾರ್ಥಿಗಳು | ರೂ 1.51 ಲಕ್ಷ |
ಸತತ 12 ವರ್ಷ ಶ್ರೇಷ್ಠ ಸಂಘ ಗೌರವ
ಸಂಘದ ಅತ್ಯುತ್ತಮ ಪ್ರಗತಿಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (SCDCC) 2015ರಿಂದ ಸತತ 12 ವರ್ಷಗಳ ಕಾಲ ‘ಉತ್ತಮ ಸಹಕಾರ ಸಂಘ’ ಪ್ರಶಸ್ತಿ ಹಾಗೂ ಗೌರವ ಫಲಕ ನೀಡಿ ಪುರಸ್ಕರಿಸಿದೆ ಎಂದು ಪದ್ಮನಾಭ ಕೊಟ್ಟಾರಿ ತಿಳಿಸಿ, ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ನಿರ್ದೇಶಕರುಗಳಾದ ಚಂದ್ರಶೇಖರ ಟೈಲರ್, ಮಹಾಬಲ ಸಾಲ್ಯಾನ್, ಸುರೇಶ್ ಶೆಟ್ಟಿ, ಕೊರಗಪ್ಪ ಗೌಡ, ಪ್ರಭಾಕರ ಶೆಟ್ಟಿ ಬಿ.ಯನ್, ಜಯರಾಮ ರೈ, ಅರುಣಾ ವಿ.ಭಟ್, ವಿಜಯ ಪ್ರಕಾಶ್, ಅಜಿತ್ ಎಂ, ಕೊರಗಪ್ಪ ನಾಯ್ಕ ಹಾಗೂ ನೋಣಯ್ಯ ಎಂ.ಆರ್ ಉಪಸ್ಥಿತರಿದ್ದರು. ನಿರ್ದೇಶಕ ಜಯರಾಮ ರೈ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.