ಕಾಸರಗೋಡು: ಮೂಲತಃ ಕಾಸರಗೋಡು ಜಿಲ್ಲೆ ನೀರ್ಚಾಲು ಸಮೀಪದ ಬೊಳುಂಬು ಮೂಲದ ದಂಪತಿ ವಯೋಸಹಜ ಅನಾರೋಗ್ಯದಿಂದ 9 ದಿನಗಳ ಅಂತರದಲ್ಲಿ ನಿಧನರಾಗಿದ್ದಾರೆ.
ಬಂಟ್ವಾಳ ತಾಲೂಕು ಮುಳಿಯ ಎಂಬಲ್ಲಿ ಅನೇಕ ವರ್ಷ ಕೃಷಿಕರಾಗಿದ್ದ ಸುಬ್ರಾಯ ಭಟ್-ವನಜಾಕ್ಷಿ ಭಟ್ ದಂಪತಿ ಕೆಲ ವರ್ಷಗಳಿಂದ ಬೆಂಗಳೂರಿನ ಪುತ್ರನ ಮನೆಯಲ್ಲಿ ವಾಸವಿದ್ದರು.
ವಯೋಸಹಜ ಅನಾರೋಗ್ಯದಿಂದ ಸೆ.9ರಂದು ವನಜಾಕ್ಷಿ ಭಟ್ (75) ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದಾಗಿ ಒಂಭತ್ತೇ ದಿನಗಳಲ್ಲಿ ಸೆ.18ರಂದು ಸುಬ್ರಾಯ ಭಟ್ (79) ಪುತ್ರನ ಮನೆಯಲ್ಲೇ ನಿಧನರಾದರು. 19ರಂದು ವನಜಾ ಅವರ ಉತ್ತರ ಕ್ರಿಯೆ ನಿಗದಿಯಾಗಿತ್ತು, ಅದರ ಹಿಂದಿನ ದಿನವೇ ಅವರ ಪತಿಯೂ ಪತ್ನಿಯನ್ನು ಹಿಂಬಾಲಿಸಿದಂತಾಗಿದೆ. ಈ ದಂಪತಿ ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ.