ಬಂಟ್ವಾಳ

ಸುಸಜ್ಜಿತ ಘನತ್ಯಾಜ್ಯ ಘಟಕ, ಸರ್ವ ಋತು ರಸ್ತೆ ನಿರ್ಮಾಣದ ಸಾಧನೆ

| ರಾಯಿ ಗ್ರಾಮ ಪಂಚಾಯಿತಿ: 19 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ

ಈ ಗ್ರಾಮ ಪಂಚಾಯಿತಿಗೆ ಎರಡು ಗ್ರಾಮಗಳು ಒಳಪಡುತ್ತವೆ. ಒಂದು ರಾಯಿ, ಇನ್ನೊಂದು ಕೊಯಿಲ. ಸದ್ಯಕ್ಕೆ ಅಭಿವೃದ್ಧಿಗೆ ಕಾಯುತ್ತಿರುವ ರಾಜ್ಯ ಹೆದ್ದಾರಿ ಬಿ.ಸಿ.ರೋಡ್ ಮೂಡುಬಿದಿರೆ ಮಾರ್ಗದ ಮಧ್ಯೆಯೇ ರಾಯಿ ಗ್ರಾಮ ಪಂಚಾಯಿತಿ ಕಚೇರಿ ಕಾಣಸಿಗುತ್ತದೆ. ಇಲ್ಲೇ ಸುತ್ತಮುತ್ತ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಸರಕಾರಿ ಕಚೇರಿಗಳು, ವ್ಯವಹಾರ ಕೇಂದ್ರವಿದೆ. ಕಳೆದ ಐದು ವರ್ಷಗಳಲ್ಲಿ ರಾಯಿ ಗ್ರಾಮ ಪಂಚಾಯಿತಿ ಕಾಮಗಾರಿಯ ದೃಷ್ಟಿಯಿಂದ ಮೂರು ಮಹತ್ವದ ಸಾಧನೆ ಮಾಡಿದೆ. ಮೊದಲನೆಯದ್ದು ಎರಡೂ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತ ಸ್ಮಶಾನ ಹಾಗೂ ಸಮರ್ಪಕ ನಿರ್ವಹಣೆಗೆ ವ್ಯವಸ್ಥೆ. ಎರಡನೆಯದ್ದು ಸುಸಜ್ಜಿತ ಘನತ್ಯಾಜ್ಯ ಘಟಕ ಸ್ವಚ್ಛ ಸಂಕೀರ್ಣ ನಿರ್ಮಾಣ. ಮೂರನೆಯದ್ದು ಒಳರಸ್ತೆಗಳ ಅಭಿವೃದ್ಧಿ.

238 ಕಾಮಗಾರಿಗಳು:

ಜಾಹೀರಾತು

ಕಳೆದ ಐದು ವರ್ಷಗಳಲ್ಲಿ 19 ಕೋಟಿ ರೂ ವೆಚ್ಚದ 238 ಕಾಮಗಾರಿಗಳು ನಡೆದಿವೆ. 15ನೇ ಹಣಕಾಸು ಆಯೋಗದ ಅನುದಾನದಲ್ಲಿ 2020-21 ರಲ್ಲಿ 28,33,168 ರೂ ವೆಚ್ಚ, 2021-22 ರಲ್ಲಿ 19,04,645 ರೂ ವೆಚ್ಚ, 2022-23 ರಲ್ಲಿ 19,48,344 ರೂ ವೆಚ್ಚ, 2023-24ರಲ್ಲಿ  21,05,092 ರೂ ಮತ್ತು 2024-25ರಲ್ಲಿ 33,68,434 ರೂ ವೆಚ್ಚದ ಕೆಲಸ ಕಾರ್ಯಗಳು ಸಂಪನ್ನಗೊಂಡಿವೆ.  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಅನುದಾನದಲ್ಲಿ ಸುಮಾರು 18 ಕೋಟಿ ರೂಗೂ ಅಧಿಕ ವೆಚ್ಚ ಹಾಗು ಗ್ರಾಪಂ ಅನುದಾನದಲ್ಲಿ 1 ಕೋಟಿ ರೂ ಗೂ ಅಧಿಕ ವೆಚ್ಚದ ಕಾಮಗಾರಿಗಳು ನಡೆದಿವೆ.

ರಾಯಿ ಗ್ರಾಮದಲ್ಲಿ ಏನೇನಾಗಿದೆ:

ರಾಯಿ ಪಡ್ರಾಯಿ ಗ್ರಾಮದ ಕರ್ಪೆಗುತ್ತಿಗೆ ಕಾಂಕ್ರೀಟ್‌ರಸ್ತೆ 6.5ಕೋಟಿ , ರಾಯಿ ದೈಲದಿಂದ ದಡ್ಡುವರೆಗೆ ರಸ್ತೆ 1.3 ಕೋಟಿ,ರಾಯಿ ದೈಲದಿಂದ ಕೈರೋಲಿ ರಸ್ತೆ 40 ಲಕ್ಷ , ಕುದ್ಕೋಳಿಯಿಂದ ತಾರಾಬರಿ ರಸ್ತೆ 20 ಲಕ್ಷ , ತಾರಾಬರಿಯಿಂದ ಕಾರಂಬಡೆ ರಸ್ತೆ 10 ಲಕ್ಷ , ರಾಯಿ ದ್ವಾರದಿಂದ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ 35 ಲಕ್ಷ, ರಾಯಿಯಿಂದ ಗೋಲಿತ್ತಬೆಟ್ಟು ರಸ್ತೆ 10 ಲಕ್ಷ, ಲಕ್ಷ್ಮಿಕೋಡಿ ಎಂಬಲ್ಲಿ ತೋಡಿಗೆ ಸೇತುವೆ 75 ಲಕ್ಷ, ಕೈರೋಳಿ ಎಂಬಲ್ಲಿ ತೋಡಿಗೆ ಸೇತುವೆ ನಿರ್ಮಾಣ 75 ಲಕ್ಷ ,  ನೀರಲ್ಕೆಯಿಂದ ಬೊಲ್ಕಲ್ಲುಗುಡ್ಡೆ ರಸ್ತೆ 8 ಲಕ್ಷ, ರಾಯಿ ಮಾಬೆಟ್ಟುವಿನಿಂದ ಕನ್ಯಾ ರಸ್ತೆ 6 ಲಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿ 20 ಲಕ್ಷ, ಬೊಲ್ಪೊಟ್ಟು ತಡ್ಯಾಲ ರಸ್ತೆ 8 ಲಕ್ಷ,  ಕುದ್ಮೊಣಿ ರಸ್ತೆ 10 ಲಕ್ಷ ,ವಿವೇಕಾನಂದ ನಗರ ರಸ್ತೆ 15 ಲಕ್ಷ , ಸ್ಮಶಾನ ಅಭಿವೃದ್ಧಿ 15 ಲಕ್ಷ , ಘನತ್ಯಾಜ್ಯ ಘಟಕ 16 ಲಕ್ಷ , ಬಜಿಲೊಡಿ ರಸ್ತೆ 10 ಲಕ್ಷ,  ಕುದ್ಕೊಳಿ ಎಂಬಲ್ಲಿ ಕಿರುಸೇತುವೆ 12 ಲಕ್ಷ, ಮಿಯಲು ಎಂಬಲ್ಲಿ ಚೆಕ್‌ಡ್ಯಾಂ 2.5 ಕೋಟಿ, ರಾಯಿ ಕೈತ್ರೋಡಿ ರಸ್ತೆ 30 ಲಕ್ಷ,ಬದನಡಿ ರಸ್ತೆ 50 ಲಕ್ಷ, ರಾಯಿ ನಾರಾಯಣಗುರು ಮಂದಿರಕ್ಕೆ ತಡೆಗೋಡೆ 30 ಲಕ್ಷ,  ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಇಂಟರ್‌ಲಾಕ್‌ಲಕ್ಷ, ನಾರಾಯಣಗುರು ಮಂದಿರಕ್ಕೆ ಇಂಟರ್‌ಲಾಕ್‌ ಲಕ್ಷ.

VNR GOLD

ಕೊಯಿಲ ಗ್ರಾಮದಲ್ಲಿ:

  • ಬದನಡಿ ದೇವಸ್ಥಾನದ ಕೆರೆಗೆ ತಡೆಗೋಡೆ 50 ಲಕ್ಷ, ಕೈತ್ರೋಡಿ ಪೂಜಾರ್ತೋಡಿ ರಸ್ತೆ 20 ಲಕ್ಷ,  ಅಟ್ಲೊಟ್ಟು ರಸ್ತೆ 10 ಲಕ್ಷ,
  • ಪ.ಜಾತಿ ಕಾಲೊನಿ ರಸ್ತೆ 40 ಲಕ್ಷ, ಕೈತ್ರೋಡಿ ಎಂಬಲ್ಲಿ ಸ್ಮಶಾನ ಅಭಿವೃದ್ಧಿ 8 ಲಕ್ಷ, ಅಂತರ ಎಂಬಲ್ಲಿ ರಸ್ತೆ 40 ಲಕ್ಷ,
  • ಬುರಾಲ್‌ರಸ್ತೆ 20 ಲಕ್ಷ, ಗೋವಿದಂಬೆಟ್ಟು ಪರಾರಿ ರಸ್ತೆ 20 ಲಕ್ಷ, ಕೊಯಿಲ ಮಡಂದೂರು ರಸ್ತೆ 20 ಲಕ್ಷ, ಪಾಂಡವರಗುಡ್ಡೆ ರಸ್ತೆ 20 ಲಕ್ಷ, ನೀರಲ್ಕೆ ರಸ್ತೆ 20 ಲಕ್ಷ, ಪಡೀಲು ಬೆಟ್ಟು ರಸ್ತೆ 10 ಲಕ್ಷ , ಅನ್ನಳಿಕೆ ರಸ್ತೆ 5 ಲಕ್ಷ

ಬೇಡಿಕೆಗಳೇನು?

  1. ಮನೆ ಮನೆ ಕಸ ಸಂಗ್ರಹಕ್ಕೆ ಪ್ರಸ್ತುತ ತ್ರಿಚಕ್ರ ವಾಹನವಿದ್ದು, ನಾಲ್ಕು ಚಕ್ರದ ವಾಹನದ ಬೇಡಿಕೆ ಇದೆ.

2. ಬಿ.ಸಿ.ರೋಡ್ ಮೂಡುಬಿದಿರೆ ಮಾರ್ಗದಲ್ಲಿ ಸರಕಾರಿ ಬಸ್ ಓಡಾಟವಿದ್ದರೆ, ರಾಯಿ, ಕೊಯಿಲ ಗ್ರಾಮಸ್ಥರಿಗೂ ಅನುಕೂಲ

3. ರಾಯಿ ಗ್ರಾಪಂಗೆ ಪ್ರಸ್ತುತ ಕಟ್ಟಡವಿದೆ. ಇದು ಸುಸಜ್ಜಿತವಾಗಿದೆ. ಆದರೂ ಸ್ವಂತ ಜಮೀನು ಹಾಗೂ ವಿವಿಧ ಸೇವಾ ಕೇಂದ್ರಗಳನ್ನು ಒಳಗೊಂಡ ವಿಶಾಲ ಕಟ್ಟಡ ನಿರ್ಮಾನವಾಗಬೇಕಾದ ಅವಶ್ಯಕತೆ ಇದೆ.

====

ನಮ್ಮ ಗ್ರಾಮ ಅಭಿವೃದ್ಧಿಗೆ ಶಾಸಕ ರಾಜೇಶ್ ನಾಯ್ಕ್ ಪೂರಕ ಸ್ಪಂದನೆ ನೀಡಿದ್ದು, ಲಭ್ಯ ಅವಕಾಶದಲ್ಲಿ ಬೃಹತ್ ಕೊಡುಗೆಯನ್ನು ನೀಡಿದ್ದಾರೆ. ಗ್ರಾಮ ಪಂಚಾಯಿತಿ ಸರ್ವಾಂಗೀಣ ಪ್ರಗತಿಯನ್ನು ಕಂಡಿದ್ದು, ಇನ್ನಷ್ಟು ಅಭಿವೃದ್ಧಿ ನಿರೀಕ್ಷದೆಯಲ್ಲಿದ್ದೇವೆ.

ಸಂತೋಷ್ ರಾಯಿಬೆಟ್ಟು, ಮಾಜಿ ಅಧ್ಯಕ್ಷರು, ರಾಯಿ ಗ್ರಾಪಂ

=====

ರಾಯಿ ಗ್ರಾಮ ಪಂಚಾಯಿತಿಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣವಾಗಿದೆ. ಎರಡು ಗ್ರಾಮಗಳಲ್ಲಿ ಎರಡು ಸ್ಮಶಾನಗಳು ಸುಸಜ್ಜಿತವಾಗಿದ್ದು, ನಿರ್ವಹಣೆ ಪಂಚಾಯಿತಿಯಿಂದ ಆಗುತ್ತಿದೆ. ರಸ್ತೆಗಳ ಅಭಿವೃದ್ಧಿ ಸೇರಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಮಾರು 19 ಕೋಟಿ ರೂ ವೆಚ್ಚದ ಕಾಮಗಾರಿ ನಡೆದಿದೆ.

  • ಧರ್ಮರಾಜ್ ಪಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಾಯಿ ಗ್ರಾಮ ಪಂಚಾಯಿತಿ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.