.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬೆಂಗಳೂರಿಗೆ ತೆರಳುವ ಬಸ್ಸುಗಳೇ ಎಂಟ್ರಿ ಆಗಿಲ್ಲ. ಕಾರಣ, 2017ರಲ್ಲಿ ಉದ್ಘಾಟನೆಗೊಂಡ ಈ ನಿಲ್ದಾಣಕ್ಕೆ ಇದುವರೆಗೂ ಮಂಗಳೂರಿನಿಂದ ಬಿ.ಸಿ.ರೋಡ್ ಮಾರ್ಗವಾಗಿ ಬೆಂಗಳೂರು, ಮೈಸೂರು ಸಹಿತ ಯಾವುದೇ ಪ್ರದೇಶಗಳಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪ್ರವೇಶವೇ ಮಾಡಿಲ್ಲ!! ಪ್ರಸ್ತುತ ಮಂಗಳೂರಿಗೆ ಬೇರೆ ಬೇರೆ ಪ್ರದೇಶಗಳಿಂದ ಆಗಮಿಸುವ ಬಸ್ಸುಗಳು ಬಿ.ಸಿ.ರೋಡ್ ಪ್ರವೇಶಿಸಿದ ಬಳಿಕ ಕೇವಲ ಟಿ.ಸಿ. ಎಂಟ್ರಿಗೋಸ್ಕರ ನಿಲ್ದಾಣ ಪ್ರವೇಶಿಸುತ್ತದೆ. ಪ್ರಯಾಣಿಕರು ಬೆರಳೆಣಿಕೆಯಷ್ಟು ಮಂದಿ ಹತ್ತುತ್ತಾರೆ..ಉಳಿದಂತೆ ನಿಲ್ದಾಣ ನೀರವ ಮೌನ!

ಬಸ್ ನಿಲ್ದಾಣ ಜಾಗ ಗುರುತಿಸಿ, ಕಟ್ಟಿಸುವ ವೇಳೆ ಇಲ್ಲಿ ಬಸ್ಸುಗಳು ಹೇಗೆ ಬರುತ್ತದೆ ಎಂಬ ಕನಿಷ್ಠ ದೂರದೃಷ್ಟಿಯೂ ಹೊಂದಿರದೆ, ಕೇವಲ ಸಾಧನೆಗಳ ಪಟ್ಟಿಗೆ ಸೇರ್ಪಡೆಗೆಂದೇ 10 ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ಇದಕ್ಕಾಗಿ ವ್ಯಯಿಸಲಾಗಿದೆ.

ಪ್ರಯಾಣಿಕರು ಇಂದಿಗೂ ಬಿ.ಸಿ.ರೋಡ್ ಪೇಟೆಯಲ್ಲಿಯೇ ಬಸ್ಸಿಗಾಗಿ ಕಾಯುತ್ತಾರೆ. ಅಲ್ಲಿ ಸಮರ್ಪಕ ನಿಲ್ದಾಣವೂ ಇಲ್ಲ. ಮಂಗಳೂರಿಗೆ ಬಸ್ಸಿಗೆಂದು ನಿಲ್ಲುವವರ ಪಾಡು ಹೇಳತೀರದು. ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಇಲ್ಲಿಗೇ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತದೆ ಎಂದಾದ ಮೇಲೆ ಇನ್ನು ನಿಲ್ದಾಣಕ್ಕೆ ಯಾರು ಬರುತ್ತಾರೆ?
ಬಸ್ ಗೆಂದು ಬರುವವರು ಕಡಿಮೆ:

ಬಸ್ ನಿಲ್ದಾಣ ಪ್ರಯಾಣಿಕರಿಗೆ ಅನುಕೂಲವಾಗಲು ಎಂದು ನಿರ್ಮಿಸುವುದು ವಾಡಿಕೆ. ಆದರೆ ಇಲ್ಲಿ ಬಸ್ ಹತ್ತಲು ಬರುವವರ ಬದಲು ಸಮಯ ಸರಿದೂಗಿಸಲು ಆಗಮಿಸುವವರು ಅಧಿಕ. ಇಲ್ಲಿ ಉತ್ತಮವಾದ ನೆಲಹಾಸು ಇದೆ. ಕುಳಿತುಕೊಳ್ಳಲು ಆಸನ, ಫ್ಯಾನ್ ವ್ಯವಸ್ಥೆ ಇದೆ. ಹೀಗಾಗಿ ಇಲ್ಲಿಯೇ ಕಾಲಕಳೆಯಲು ಆಗಮಿಸುವವರೂ ಇದ್ದಾರೆ. ಇಲ್ಲಿನ ಮೇಲಂತಸ್ತು ಬಿಕೋ ಎನ್ನುತ್ತದೆ. ಹಗಲು ಹೊತ್ತಾದರೂ ಬೆರಳೆಣಿಕೆಯಷ್ಟು ಮಂದಿಯಾದರೂ ಕಾಣಿಸುತ್ತಾರೆ. ರಾತ್ರಿ ಹೊತ್ತು ಯಾರು ಇಲ್ಲಿಗೆ ಬಂದು ಏನು ಮಾಡಿದರೂ ಗೊತ್ತಾಗದಂಥ ಪರಿಸ್ಥಿತಿ ಇದೆ. ಹೆಸರಿಗೆ ಸಿಸಿ ಕ್ಯಾಮರಾ ಇದೆ. ಆದರೆ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಯಾವಾಗಲೂ ಕಾಣಿಸುವುದಿಲ್ಲ. ಇಲ್ಲಿ ಒಂದು ಅಂಗಡಿ ಮಳಿಗೆ ಇದೆ ಎಂಬುದನ್ನು ಹೊರತುಪಡಿಸಿದರೆ, ಬೇರಾವುದೇ ಚಟುವಟಿಕೆಗಳು ಇಲ್ಲ. ಪಾರ್ಕಿಂಗ್ ಜಾಗದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿ.ಸಿ.ರೋಡಿನ ಪಾರ್ಕಿಂಗ್ ಸಮಸ್ಯೆಗೆ ಇದು ಸ್ವಲ್ಪ ಮಟ್ಟಿನ ಪರಿಹಾರ ನೀಡುತ್ತಿದೆ.



Be the first to comment on "ಇದ್ದೂ ಇಲ್ಲದಂತಾದ ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ | ಪ್ರಯಾಣಿಕರೂ ಬರೋದಿಲ್ಲ, ಎಲ್ಲ ಬಸ್ಸುಗಳೂ ಪ್ರವೇಶಿಸುವುದಿಲ್ಲ"