
ಬಂಟ್ವಾಳ ತಾಲೂಕು ಬಿಸಿರೋಡ್ ಸಮೀಪದ ಕೆ. ಎಸ್. ಆರ್. ಟಿ.ಸಿ . ಬಸ್ ಸ್ಟಾಂಡ್ ವಾತಾವರಣದಲ್ಲಿ ಹಾಡಹಗಲೇ ಹುಡುಗಿಯನ್ನು ಸಾರ್ವಜನಿಕ ಎದುರಲ್ಲೇ ಹರಿತವಾದ ಕತ್ತಿ ಯಿಂದ ಹತ್ಯೆ ಮಾಡಿದ ಕ್ರೂರಿ ಆರೋಪಿ ಯಾರಾದರೂ ಅವನನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಯೊಂದಿಗೆ ಭವಿಷ್ಯದಲ್ಲಿ ನ್ಯಾಯಾಲಯ ಮರಣ ದಂಡನೆ ವಿಧಿಸುವಂತಹ ಪ್ರಕರಣ ದಾಖಲಿಸಬೇಕು ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

ಘಟನೆಯಿಂದ ಸಮಾಜದಲ್ಲಿ ಆತಂಕದ ಭಾವನೆ ಉಂಟಾಗಿದೆ. ಹಂತಕನನ್ನು ತಕ್ಷಣವೇ ಬಂಧಿಸಬೇಕು ಹಾಗೂ ಅವನಿಗೆ ಸಹಕಾರ ನೀಡಿರುವ ಸಹ ಆರೋಪಿಗಳನ್ನು ಸಹ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ತಿಳಿಸಿದ್ದಾರೆ.

ಯುವತಿ ಹತ್ಯೆ ಕಠಿಣ ಶಿಕ್ಷೆಗೆ ಆಗ್ರಹ : ಬಿಜೆಪಿ ಯುವಮೋರ್ಚಾ ಬಂಟ್ವಾಳ ಖಂಡನೆ
ಬಂಟ್ವಾಳ ತಾಲೂಕಿನ ಹೃದಯ ಭಾಗ ಬಿಸಿ ರೋಡ್ ನಲ್ಲಿ ಯುವಕನೊಬ್ಬ ಯುವತಿಯನ್ನು ಮಾರಕಾಸ್ತ್ರದಿಂದ ಹತ್ಯೆಗೈದ ಘಟನೆ ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿದ್ದು ಈ ಘಟನೆಯನ್ನು ಬಂಟ್ವಾಳ ಬಿಜೆಪಿ ಯುವಮೋರ್ಚಾ ಉಗ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಈ ಘಟನೆಯ ಆರೋಪಿ ಯಾರೇ ಇರಲಿ ಅಥವಾ ಕಾರಣಗಳು ಏನೇ ಇರಲಿ ಆರೋಪಿಯ ಶೀಘ್ರ ಬಂಧನವಾಗಬೇಕು. ಕಠಿಣ ಶಿಕ್ಷೆ ಆಗಬೇಕು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತಿದ್ದೇವೆ. ಇತ್ತೀಚಿಗೆ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಸರಕಾರ ದಿಟ್ಟ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕು ಎಂದು ಈ ಮೂಲಕ ಯುವಮೋರ್ಚಾ ಆಗ್ರಹಿಸುತ್ತದೆ ಎಂದು ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Be the first to comment on "ಹತ್ಯೆ ಆರೋಪಿ ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಅಗ್ರಹ: ಬಂಟ್ವಾಳ ಬಿಜೆಪಿ"