ಬಂಟ್ವಾಳ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಶ್ಮೀನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯ ಇಲ್ಲಿಯ ಜೀರ್ಣೋದ್ದಾರದ ಪ್ರಯುಕ್ತ ದೇವಸ್ಥಾನದ ಹಳೇ ಕಟ್ಟಡಗಳಾದ ಗರ್ಭಗುಡಿ, ತೀರ್ಥಮಂಟಪ, ಸುತ್ತು ಪೌಳಿ, ಆಂಜನೇಯ ಗುಡಿ, ತೆರವುಗೊಳಿಸುವ ಕಾರ್ಯ ಆರಂಭಗೊಂಡಿತು.
ಸಂಘ ಸಂಸ್ಥೆಗಳಾದ ಶ್ರೀ ಲಕ್ಶ್ಮೀನರಸಿಂಹ ಗೆಳೆಯರ ಬಳಗ ರಥಬೀದಿ, ಗೆಳೆಯರ ಬಳಗ ಅರಿಕಲ್ಲು, ಗೆಳೆಯರ ಬಳಗ ಕಲ್ಲಾಜೆ, ಶ್ರೀ ಲಕ್ಶ್ಮೀ ಗೆಳೆಯರ ಬಳಗ ಕೊರತಿಗುರಿ, ಶಿವಂ ಕಡೇ ಶಿವಾಲಯ, ಶ್ರೀ ಸತ್ಯದೇವತಾ ಗೆಳೆಯರ ಬಳಗ ಬೊಲ್ಲರ್, ಸತ್ಯದೇವತಾ ಗೆಳೆಯರ ಬಳಗ ನೆತ್ತರ, ಉದಯ ಯುವಕ ಮಂಡಲ ಶೇರಾ, ಶ್ರೀ ರಾಮ ಭಜನಾ ಮಂಡಳಿ ಪ್ರತಾಪನಗರ, ಯುವಶಕ್ತಿ ಕಡೇಶಿವಾಲಯ, ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್, ಛತ್ರಪತಿ ಶಿವಾಜಿ ಸಮಾಜ ಸೇವಾ ಸಂಘ ಕಡೇಶಿವಾಲಯ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕಡೇಶಿವಾಲಯ, ಬಂಟರ ಸಂಘ ಕಡೇಶಿವಾಲಯ, ನವೋದಯ ಸ್ವ ಸಹಾಯ ಸಂಘ ಕಡೇಶಿವಾಲಯ, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ, ಒಡಿಯೂರು ಸ್ವ ಸಹಾಯ ಸಂಘ, ಮಾತೃಸಂಜೀವಿನಿ ಸ್ವ ಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸದಸ್ಯರು ಪ್ರತಿದಿನ ಸುಮಾರು 400ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕರಸೇವೆ ಮಾಡಿದರು,
ಈ ಸಂದರ್ಭದಲ್ಲಿ ಕರಸೇವಾ ಸಮಿತಿ ಸಂಚಾಲಕರಾದ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ ನುಳಿಯಲು, ಸಮಿತಿ ಸದಸ್ಯರು. ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಡಾ, ಶ್ರೀಪತಿ ರಾಪ್ ದಾಳಿಂಬ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು