ಕಲ್ಲಡ್ಕ

ಕಶೆಕೋಡಿ ದೇವಸ್ಥಾನದಲ್ಲಿ ವಿಶ್ವ ಯೋಗ ದಿನಾಚರಣೆ

ಬಂಟ್ವಾಳ: ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಆಡಳಿತ ಮಂಡಳಿ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಆಡಳಿತ ಮೊಕ್ತೇಸರ ಸುಧಾಕರ ಶೆಣೈ ಮರೋಳಿ ಉದ್ಘಾಟಿಸಿದರು. ಆರೆಸ್ಸೆಸ್ ದ.ಪ್ರಾಂತ ಕಾರ್ಯವಾಹ ಜಯಪ್ರಕಾಶ್ ಮೋನಡ್ಕ ಪ್ರಾತ್ಯಕ್ಷಿಕೆ ನಡೆಸಿದರು. ಡಾ. ವಿಜಯಲಕ್ಷ್ಮೀ ನೇರಳಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಮಟ್ಟದ ಯೋಗಪಟುಗಳಾದ ಸಾನ್ವಿ ನಾಯಕ್ ಮೈರಾ ಹಾಗೂ ದೀಕ್ಷ ಪ್ರಭು ಕೆಮ್ಮಾಯಿ ವಿಶೇಷ ಯೋಗ ಆಸನಗಳನ್ನು ಪ್ರದರ್ಶಿಸಿದರು. ಮುಕ್ತೇಸರ ದಯಾನಂದ ನಾಯಕ್  ಬೆಳ್ತಂಗಡಿ ವಂದಿಸಿದರು.

ಡಾ. ಭುವನೇಶ್ ಶಾನಭಾಗ್ ಬೆಂಗಳೂರು, ಡಾ ಶಿವಪ್ರಕಾಶ್ ಮೋನಡ್ಕ, ವೆಂಕಟರಾಯ ಪ್ರಭು ಪೂರ್ಲಿಪ್ಪಾಡಿ, ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ ರಮೇಶ್ ನಾಯಕ್ ಗುಂಡೂರು, ಅನುವಂಶಿಕ ಮುಕ್ತೇಸರರಾದ ಕಂಟಿಕ ವೆಂಕಟ್ರಾಯ ಶೆಣೈ, ಮಾಜಿ ಮೊಕ್ತೇಸರರಾದ ಕಂಟಿಕ ಗೋಪಾಲ ಶೆಣೈ, ಸುಧಾಕರ ಪ್ರಭು ಪೆರ್ಮರೋಡಿ, ಮೊಕ್ತೇಸರರಾದ ನಿತ್ಯಾನಂದ ಭಟ್ ಬರೆಪ್ಪಾಡಿ, ಚಂದ್ರಶೇಖರ್ ಪ್ರಭು ಹೆಣ್ಣೂರು, ಕಶೆಕೋಡಿ ರಾಘವೇಂದ್ರ ನಾಯಕ್, ಸಂದೀಪ್ ಪ್ರಸಾದ್ ಕಡಂಬು, ಸಚಿನ್ ಇಂದಾಜೆ, ಮಾನಸ ನಾಯಕ್ ಉಪಸ್ಥಿತರಿದ್ದರು.

VNR GOLD
ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts