ಕಾರ್ಗಿಲ್ ವಿಜಯ ದಿವಸವು ಪ್ರತಿಯೊಬ್ಬ ನಾಗರೀಕನ ಹೆಮ್ಮೆಯ ಸಂಗತಿ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಮೋನಪ್ಪ ಪೂಜಾರಿ ಬಿ ಎಂ ಹೇಳಿದರು.
ಮಜಿ ವೀರಕಂಭದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸದ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
27ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ನೆನಪಿಗೆ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟು ಸೈನಿಕರು ದೇಶದ ರಕ್ಷಣೆಯ ಹೊರತಾಗಿಯೂ ಪರಿಸರ ಪ್ರಜ್ಞೆಯನ್ನು ಮೂಡಿಸುವಲ್ಲಿ ಕರ್ತವ್ಯ ನಿರತರಾಗಿರುತ್ತಾರೆ ಎಂದು ತಿಳಿಸಿಕೊಟ್ಟರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೋನಪ್ಪ ಪೂಜಾರಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿ ಸುಮತಿ ಮೋನಪ್ಪ ಅವರನ್ನು ಶಾಲೆ ಪರವಾಗಿ ಅಭಿನಂದಿಸಲಾಯಿತು.
ಶಿಕ್ಷಕ ತೌಸೀಫ್ ಅಹ್ಮದ್ ಮಾತನಾಡಿ ಪಠ್ಯದ ಕಲಿಕೆ ಜೊತೆ ಸ್ಕೌಟ್ ಗೈಡ್ ಸೇವಾದಳ ಎನ್ ಸಿ ಸಿ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿಸ ಬೇಕು ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಶಿವಪ್ರಸಾದ್, ಬಾಲಕೃಷ್ಣ ಗೌಡ, ವೆಂಕಪ್ಪ ಗೌಡ, ಕ್ಯಾಪ್ಟನ್ ಧನಂಜಯ, ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿ, ಶಾಲಾ ಹಿರಿಯ ವಿದ್ಯಾರ್ಥಿ ಸುಮತಿ ಮೋನಪ್ಪ ಪೂಜಾರಿ, ವೀರಕಂಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ್ ಶರ್ಮ, ಶಾಲಾ ವಿದ್ಯಾರ್ಥಿ ನಾಯಕ ಮಹಮದ್ ಹಾರೂನ್ ಫರಹಾನ್ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮಾ ಪಿಜಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಜಯಲಕ್ಷ್ಮಿ, ಸಂಪ್ರಿಯ, ಪಲ್ಲವಿ, ಸುಷ್ಮ ಸಹಕರಿಸಿದರು.