
ಬಂಟ್ವಾಳ: ಪುತ್ತೂರಿನ ಪುರುಷರಕಟ್ಟೆಯ ಗುರುಕುಲ ಕಲಾಕೇಂದ್ರದ ಸುಗಮ ಸಂಗೀತ ತರಗತಿಯ ಆರನೇ ಶಾಖೆಯನ್ನು ಕಲ್ಲಡ್ಕ ಶ್ರೀರಾಮ ಮಂದಿರದ ರಾಮಾಂಗಣದಲ್ಲಿ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಉದ್ಘಾಟಿಸಿದರು.

ಅತಿಥಿಗಳಾಗಿ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ, ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ಗುರುಕುಲದ ಪೋಷಕರಾದ ವಿದ್ಯಾ ನಾಯಕ್ ಉಪಸ್ಥಿತರಿದ್ದರು. ಶ್ರೀರಾಮ ವಿದ್ಯಾಕೇಂದ್ರ ದ ಕಾರ್ಯನಿರ್ವಾಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ತಿರುಮಲೇಶ್ವರ, ಶ್ರೀ ರಾಮಮಂದಿರ ಕಾರ್ಯದರ್ಶಿ ಕ.ಕೃಷ್ಣಪ್ಪ, ಶ್ರೀರಾಮ ವಿದ್ಯಾ ಕೇಂದ್ರ ಆಡಳಿತ ಮಂಡಳಿ ಸದಸ್ಯೆ ಲಕ್ಷ್ಮಿರಘುರಾಜ್ ಉಪಸ್ಥಿತರಿದ್ದರು.

ಗುರುಕುಲ ಕಲಾಕೇಂದ್ರ ಮೆಲ್ಕಾರ್, ಬಿಸಿರೋಡ್, ಬಂಟ್ವಾಳ ಶಾಖೆಯ ವಿದ್ಯಾರ್ಥಿಗಳು, ಪೋಷಕರು, ಹೊಸದಾಗಿ ನೋಂದಾವಣೆ ಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು, ಶಿಕ್ಷಕರು, ಉಪಸ್ಥಿತರಿದ್ದರು. ಕಲಾಕೇಂದ್ರ ದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಲಾಕೇಂದ್ರದ ಸಂಚಾಲಕಿ ಗುರುಪ್ರಿಯಾ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ತ್ರಿಶಿಕ ಕಲ್ಲಡ್ಕ ಮತ್ತು ಮನಸ್ವಿ ಮೆಲ್ಕಾರ್ ತಾವೇ ತಯಾರಿಸಿದ ಹೂಗುಚ್ಛದಿಂದ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ, ಗುರುಕುಲದ ಪೋಷಕಿ ನಯನ ಬಿಸಿರೋಡ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲಾಕೇಂದ್ರ ಡಾ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.


Be the first to comment on "ಗುರುಕುಲ ಕಲಾ ಕೇಂದ್ರ ಸುಗಮ ಸಂಗೀತ ತರಗತಿ ಆರನೇ ಶಾಖೆ ಉದ್ಘಾಟನೆ"