ಕುಕ್ಕೆಸುಬ್ರಹ್ಮಣ್ಯ ವಿಶೇಷ ಉಪವಿಭಾಗದ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ ✨ಅವರಿಗೆ ಎಮಿನೆಂಟ್ ಇಂಜಿನಿಯರ್ ಪುರಸ್ಕಾರ ನೀಡಿ ಗೌರವಿಸಲಾಯಿತು.
2022 ಜುಲೈ ನಂತರ ಕುಕ್ಕೆ ಸುಬ್ರಹ್ಮಣ್ಯ ವಿಶೇಷ ಉಪವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪುತ್ತೂರು ಹಾಗೂ ಸುಳ್ಯ ಉಪವಿಭಾಗದ ಕಡಬ ತಾಲೂಕು ಕಾಮಗಾರಿಗಳ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರು ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ 3ನೇ ಹಂತದ ಡಿಪಿಆರ್ ತಯಾರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.