ಬಂಟ್ವಾಳ

ಆ.9ರಂದು ಬಂಟ್ವಾಳದಲ್ಲಿ ಅಖಿಲ ಕರ್ನಾಟಕ ಹಿರಿಯರ ಚಿಂತನಾ ಸಮಾವೇಶ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಟಾನ ವತಿಯಿಂದ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮ ಮೇರಮಜಲು ಸಂಚಾಲಕ ಹರೀಶ್ ಪೆರ್ಗಡೆಯವರನ್ನು ಪಾಣೆಮಂಗಳೂರು ಶ್ರೀ ಭಯಂಕೇರ್ಶವರ ದೇವಸ್ಥಾನದಲ್ಲಿ ಅಗಸ್ಟ್ ೯ ರಂದು ನಡೆಯುವ ಹಿರಿಯರ ಚಿಂತನ ಸಮಾವೇಶದಲ್ಲಿ ಗೌರವಾರ್ಪಣೆ ಮಾಡಿ ಸನ್ಮಾನಿಸಲಾಗುವುದು ಎಂದು ಪ್ರತಿಷ್ಟಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಕಟಿಸಿದ್ದಾರೆ.
ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಹಿರಿಯರ ಚಿಂತನಾ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಲ್ಲದೆ ನಿವೃತ್ತ ಮುಖ್ಯೋಪಾದ್ಯಾಯರಾದ ನಾರಾಯಣ ನಾಯಕ್ ಕರ್ಪೆ ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಸಂಜೀವ ನಾಯಕ್ ಕಲ್ಲೆಗ ಇವರನ್ನು ಸನ್ಮಾನಿಸಲಾಗುವುದು ಎಂದರು.

VNR GOLD

ಸಭೆಯನ್ನು ನಿವೃತ್ತ ಶಿಕ್ಷಕರಾದ ಶಂಕರ ನಾರಾಯಣ ಹೊಳ್ಳ ಉದ್ಘಾಟಿಸಿ ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶುಭ ಹಾರೈಸಿದರು.

ಸಮಾವೇಶದಲ್ಲಿ ಪೂರ್ವಾಹ್ನ ೭.೩೦ರಿಂದ ಗಣಹೋಮ, ರುದ್ರಪಠಣ ನಡೆಯಲಿದ್ದು ಪ್ರಸಿದ್ಧ ಗಮಕಿ ಮಂಜುಳಾ ಸುಬ್ರಮಣ್ಯ ಭಟ್ ಮಂಚಿ ಗಮಕ ವಾಚನ ಮಾಡಲಿದ್ದು ಈಶ್ವರ ಭಟ್ ಗುಂಡ್ಯಡ್ಕ ವ್ಯಾಖ್ಯಾನ ಮಾಡುವರು. ಶ್ರೀ ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ಚೈತನ್ಯಾನಂದಜಿ ಆಶೀರ್ವಚನ ನೀಡಲಿದ್ದಾರೆ.

ಜಾಹೀರಾತು

ಉದ್ಘಾಟನಾ ಸಮಾರಂಭದ ಬಳಿಕ ಚಿಂತನಾ ಮಂಥನ ಗೋಷ್ಠಿ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು. ಪ್ರತಿಷ್ಟಾನದ ಪ್ರಮುಖ ಪದಾಧಿಕಾರಿಗಳಾದ ಭಾಸ್ಕರ ಬಾರ್ಯ ಪುತ್ತೂರು, ಅನಾರು ಕೃಷ್ಣ ಶರ್ಮ ಬಿ.ಸಿ.ರೋಡು, ಫ್ರೊ. ವೇದವ್ಯಾಸ ರಾಮಕುಂಜ, ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಡಾ. ಬಿ.ಎನ್ ಮಹಾಲಿಂಗ ಭಟ್ ಬಿಲ್ಲಂಪದವು , ಜಯರಾಮ ಪೂಜಾರಿ ನರಿಕೊಂಬು, ರಾಜಮಣಿ ರಾಮಕುಂಜ, ಭಾರತಿ ಬಂಟ್ವಾಳ ಉಪಸ್ಥಿತರಿದ್ದರು.
ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳಾದ ಜಯಾನಂದ ಪೆರಾಜೆ, ಪ್ರೊ. ಸುಬ್ರಾಯ ಮಡಿವಾಳ,ಭವಾನಿ ಶಂಕರ ಶೆಟ್ಟಿ, ಸೀತಾರಾಮ ಶೆಟ್ಟಿ ಉಜಿರೆ, ಸುಮಿತ್ರಾ ಎಸ್ ಮಡಿವಾಳ, ಪ್ರೇಮಲತಾ ರಾವ್, ಸೀತಾರಾಮ ಶೆಟ್ಟಿ, ಚಂದ್ರಶೇಖರ ಆಳ್ವ ಪಡುಮಲೆ ಮೊದಲಾದವರು ಸಲಹೆ ಸೂಚನೆಗಳನಿತ್ತರು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.