????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಒಂದು ಬದಿ ಕಡೇಶಿವಾಲಯ ಗ್ರಾಮದ ಚಿಂತಾಮಣಿ ನರಸಿಂಹ ದೇವಸ್ಥಾನ ಮತ್ತೊಂದು ಕಡೆ ಅಜಿಲಮೊಗರುವಿನಲ್ಲಿರುವ ದರ್ಗಾ ಎರಡನ್ನೂ ಬೆಸೆಯುವ ಸೌಹಾರ್ದ ಸೇತುವೆ ನಿರ್ಮಾಣ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಸಚಿವರು ಆಗಮಿಸಿ, ಉದ್ಘಾಟನೆ ನೆರವೇರಿಸುವರು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇದರ ಪೂರ್ವಭಾವಿಯಾಗಿ ಸೇತುವೆ ಕಾಮಗಾರಿ ವೀಕ್ಷಿಸಲು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಅವರು, ಒಂದು ಕಡೆ ದೇವಸ್ಥಾನ ಮತ್ತೊಂದು ಕಡೆ ದರ್ಗಾ ಇರುವ ಕಾರಣ ಈ ಸೇತುವೆಗೆ ನಾನು ಸೌಹಾರ್ದ ಸೇತುವೆ ಎಂಬ ಹೆಸರಿಡಲು ಕೇಳಿದ್ದೆ. ಆದೇಶದಲ್ಲೂ ಹಾಗೆಯೇ ಬಂತು. ಸುಮಾರು 20 ಕೋಟಿ ರೂ ವೆಚ್ಚದಲ್ಲಿ ಸೇತುವೆಯು ನಿರ್ಮಾಣಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಹಿಂದೆ ಸಿದ್ದರಾಮಯ್ಯ ಸರಕಾರವಿದ್ದ ವೇಳೆ ನಾನು ಬಂಟ್ವಾಳ ಕ್ಷೇತ್ರ ಪ್ರತಿನಿಧಿಸುತ್ತಿದ್ದ ವೇಳೆ ಹಲವು ಪ್ರಮುಖ ಕೆಲಸಗಳು ಆಗಿವೆ. ವಿಶೇಷ ಅನುದಾನವನ್ನು ತರಿಸಿ ಕೆಲಸ ಮಾಡಲಾಗಿದೆ. ನನ್ನ ಸರಕಾರ ಇಲ್ಲದಾಗಲೂ ನಾನು ವಿಶೇಷ ಅನುದಾನ ತರಿಸಿ ಕೆಲಸ ಮಾಡಿದ್ದೇನೆ. ಶಾಸಕರ ನಿಧಿ ಹಂಚುವುದು ದೊಡ್ಡ ಕೆಲಸವೇನಲ್ಲ, ಇಡೀ ರಾಜ್ಯದಲ್ಲೇ ಪ್ರಥಮ ಎನ್ನಿಸುವ ಕೆಲಸಗಳು ಬಂಟ್ವಾಳ ಕ್ಷೇತ್ರದಲ್ಲಿ ಆಗಿದೆ. ಆದರೆ ನಾನು ಶಾಸಕನಾಗಿದ್ದಾಗ ಮಂಜೂರಾತಿ ಆದ ಕೆಲಸಗಳು ಇನ್ನೂ ಆಗಿಲ್ಲ ಎಂಬ ಖೇದವಿದೆ. ಈ ಸೇತುವೆಯೂ ಅಷ್ಟೇ. ನಾನು ಶಾಸಕನಾಗಿ ಇಲ್ಲದ ಕಾರಣ ಈ ಕೆಲಸ ನಿಧಾನವಾಗಿ ಆಗುತ್ತಿದೆ, ಈಗ ನಮ್ಮ ಸರಕಾರ ಬಂದಿದೆ. ಬೇರೆ ಬೇರೆ ಕಾರಣಕ್ಕಾಗಿ ನಿಧಾನವಾಗಿದ್ದರೂ ತಾನು ಅಧಿಕಾರಿಗಳನ್ನು ನಿತ್ಯ ಸಂಪರ್ಕಿಸಿ, ಇದರ ಬೆನ್ನತ್ತಿದ್ದೆ. ಇದೀಗ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಸೌಹಾರ್ದ ಸೇತುವೆಯಿಂದ ಗ್ರಾಮಗಳೆರಡು ಬೆಸೆಯುವುದು ಅಷ್ಟೇ ಅಲ್ಲ, ಹಲವು ಊರುಗಳು ಹತ್ತಿರವಾಗಲಿವೆ ಎಂದರು. ಮತ್ತೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಸೇತುವೆ ಪೂರ್ಣಗೊಳಿಸಲು ಸಾಧ್ಯವಾಯಿತು. ಇನ್ನು ಪಿಡಬ್ಲೂಡಿ ಹಾಗೂ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಈ ಸೇತುವೆ ಉದ್ಘಾಟನೆಯಾಗಲಿದೆ. ಬಹಳ ಪ್ರಾಮುಖ್ಯತೆ ಇರುವ ಮತ್ತು ಬಹುಬೇಡಿಕೆಯ ಸೇತುವೆಯಾಗಿ ಮೂಡಿಬರಲಿದೆ ಎಂದು ತಿಳಿಸಿದರು.
ಈ ಸಂದರ್ಭ ಬೀಜ ಮತ್ತು ಸಾವಯವ ಪ್ರಮಾಣಿಕರಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಪಕ್ಷ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಚಂದ್ರಶೇಖರ ಭಂಡಾರಿ, ಅಬ್ಬಾಸ್ ಆಲಿ, ಸುರೇಶ್ ಜೋರ, ಸಂಪತ್ ಕುಮಾರ್ ಶೆಟ್ಟಿ, ಶಿವಪ್ಪ ಪೂಜಾರಿ ಹಟದಡ್ಕ, ಕಾಂಚಲಾಕ್ಷಿ, ಪೂವಪ್ಪ ಪೂಜಾರಿ, ಈಶ್ವರ ಪೂಜಾರಿ, ಆದಂ ಕುಂಞ, ಸಂಜೀವ ಪೂಜಾರಿ, ಚಿದಾನಂದ ಕಡೇಶ್ವಾಲ್ಯ, ಹರಿಶ್ಚಂದ್ರ ಕಡೇಶ್ವಾಲ್ಯ, ಯೂಸುಫ್ ಕರಂದಾಡಿ ಮತ್ತಿತರರು ಉಪಸ್ಥಿತರಿದ್ದರು.