ಬಂಟ್ವಾಳ

ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ

ಬಂಟ್ವಾಳ ತಾಲೂಕಿನ ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ಕಾಲೇಜಿನ ವಿದ್ಯಾರ್ಥಿ ಸಂಘ,ಪಂಜೆ ಸಾಹಿತ್ಯ ಸಂಘ, ಇಕೋ ಕ್ಲಬ್,ರೆಡ್ ಕ್ರಾಸ್ ಘಟಕ,ಮತದಾರ ಜಾಗೃತಿ ಸಂಘ,ಮಾದಕ ದ್ರವ್ಯ ವಿರೋಧಿ ದಳ ಸಹಿತ ವಿದ್ಯಾರ್ಥಿಗಳ ಸಂಘಗಳನ್ನು ಬಂಟ್ವಾಳ ಎಸ್.ವಿ.ಟಿ. ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗಂಗಾಧರ ಆಳ್ವ ಉದ್ಘಾಟಿಸಿದರು.

ಯಾವ ಕನಸು ವಿದ್ಯಾರ್ಥಿಗಳನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ ಅಂತಹ ಕನಸನ್ನು ಬೆನ್ನಟ್ಟಿದವರು ಸಾಧಕರಾಗಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ.ಗೆಲುವಿಗೆ ಅಡ್ಡ ಹಾದಿ,ಗಿಡ್ಡ ಹಾದಿಗಳಿಲ್ಲ. ಯಾವುದೇ ಅಡೆತಡೆ ಬಂದರೂ ಹಾಕಿಕೊಂಡ ಗುರಿಯಿಂದ ವಿಚಲಿತರಾಗದೆ ಸತತ ಪರಿಶ್ರಮ ಹಾಕಿದರೆ ಗೆಲುವು ನಮ್ಮದಾಗುತ್ತದೆ. ಬೆಂಜನಪದವು ಕಾಲೇಜಿನಿಂದ ಅಂತಹ ವಿದ್ಯಾರ್ಥಿಗಳು ಮೂಡಿಬರಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಗಣಿತ ಶಾಸ್ತ್ರ ಉಪನ್ಯಾಸಕರಾದ ರವಿಚಂದ್ರ ಮಯ್ಯ ಸಂಘದ ಪದಾಧಿಕಾರಿಗಳ ಕರ್ತವ್ಯ, ಜವಾಬ್ದಾರಿಗಳನ್ನು ಕುರಿತು ಮಾರ್ಗದರ್ಶನ ಮಾಡಿದರು.ಸಂಸ್ಥೆಯ ಪ್ರಿನ್ಸಿಪಾಲ್ ಕವಿತ ಅವರು ಅಧ್ಯಕ್ಷತೆ ವಹಿಸಿ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ನಾಯಕ ತನುಷ್, ನಾಯಕಿ ಅನನ್ಯ, ಪಂಜೆ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಗಾನವಿ,ಕಾರ್ಯದರ್ಶಿ ಜಿತೇಶ್  ಜಿ ಶೆಟ್ಟಿ,ಮಾರ್ಗದರ್ಶಕರಾದ ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್,ಇಕೋ ಕ್ಲಬ್ ಅಧ್ಯಕ್ಷೆ ಫಾತಿಮತ್ ಹಫೀಫಾ, ಕಾರ್ಯದರ್ಶಿ ತೀರ್ಥಾಂಕ್, ಮಾರ್ಗದರ್ಶಕರಾದ  ಜೀವಶಾಸ್ತ್ರ ಉಪನ್ಯಾಸಕ ಮೇದಪ್ಪ ಜಿ ಆರ್ ,ರೆಡ್ ಕ್ರಾಸ್ ಘಟಕದ ಅಧ್ಯಕ್ಷೆ ಪೂಜಾ,ಕಾರ್ಯದರ್ಶಿ ಸಂಗಮೇಶ,ಉಪಾಧ್ಯಕ್ಷೆ ನಿಶ್ಮಿ,ಮಾರ್ಗದರ್ಶಕರಾದ ರಸಾಯನ ಶಾಸ್ತ್ರ ಉಪನ್ಯಾಸಕಿ ಡಾ.ಸಂಧ್ಯಾರಾಣಿ,ಮಾದಕದ್ರವ್ಯ ವಿರೋಧಿ ದಳದ ಮಾರ್ಗದರ್ಶಕರಾದ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಚಂದ್ರಶೇಖರ ಹಾಗೂ ಎಲ್ಲ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ತನುಷಾ ಆರ್ ಕಾರ್ಯಕ್ರಮ ನಿರೂಪಿಸಿ,ದೀಪಶ್ರೀ ವಂದಿಸಿದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts