ರೋಟರಿ ಕ್ಲಬ್ ಬಂಟ್ವಾಳ ಪದಗ್ರಹಣ ಕಾರ್ಯಕ್ರಮ ಬಿ.ಸಿ.ರೋಡಿನ ರೋಟರಿ ಬಿ.ಎ.ಸೋಮಯಾಜಿ ಮೆಮೋರಿಯಲ್ ಹಾನ್ ನಲ್ಲಿ ಜುಲೈ 4ರ ಶನಿವಾರ ಸಂಜೆ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ರೊಟೇರಿಯನ್ ಪಿಡಿಜಿ ವಿಕ್ರಮ ದತ್ತ ಮಾತನಾಡಿ, ಒಗ್ಗಟ್ಟಿನಿಂದ ಮುನ್ನಡೆದರೆ ಕಾರ್ಯಸಾಧನೆಯಾಗುತ್ತದೆ. ನಾವು ಬೆಳೆಯುವುದಲ್ಲದೆ, ಇನ್ನೊಬ್ಬರನ್ನು ನಾಯಕನನ್ನಾಗಿ ತಯಾರು ಮಾಡಬೇಕು, ಹೊಸದಾಗಿ ಸೇರುವವರಿಗೆ ಜವಾಬ್ದಾರಿಯನ್ನು ನೀಡಿ ಬೆಳೆಸಬೇಕು, ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿ ಮುನ್ನಡೆಯಿರಿ ಎಂದು ಶುಭ ಹಾರೈಸಿದರು.
ರೋಟರಿ ಬುಲೆಟಿನ್ ರೋಟ್ ವಾಲ್ ಬಿಡುಗಡೆ ಮಾಡಿ ಮಾತನಾಡಿದ ರೋಟರಿ ಜಿಲ್ಲೆ 3181ರ ಝೋನ್ 4ರ ಅಸಿಸ್ಟೆಂಟ್ ಗವರ್ನರ್ ಡಾ. ಶಶಿಧರ ಡೋಂಗ್ರೆ ಮಾತನಾಡಿ, ರೋಟರಿ ಕ್ಲಬ್ ಬಂಟ್ವಾಳ ಸಮಾಜಮುಖಿ ಕಾರ್ಯಗಳಿಂದ ಗಮನ ಸೆಳೆಯುತ್ತಿದ್ದು, ಉತ್ತಮ ಕಾರ್ಯ ನಡೆಸಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಜಿಲ್ಲೆ 3181ರ ಝೋನ್ 4ರ ಝೋನಲ್ ಲೆಫ್ಟಿನೆಂಟ್ ಬೇಬಿ ಕುಂದರ್ ಮಾತನಾಡಿ, ಬಂಟ್ವಾಳ ರೋಟರಿ ಕ್ಲಬ್ ಹಲವು ಮೈಲಿಗಲ್ಲುಗಳನ್ನು ಸಾಧಿಸಿ ಮುನ್ನಡೆದಿದ್ದು, ಈ ಬಾರಿಯೂ ತನ್ನ ಚಟುವಟಿಕೆಗಳ ಮೂಲಕ ಗಮನ ಸೆಳೆಯಲಿ ಎಂದರು.
ಈ ಸಂದರ್ಭ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ರವಿಚಂದ್ರ ಬಂಟ್ವಾಳ ಮಾತನಾಡಿ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ರವಿರಾಜ ಶೆಟ್ಟಿ, ಕೋಶಾಧಿಕಾರಿ ಐತಪ್ಪ ಪೂಜಾರಿ, ಉಪಾಧ್ಯಕ್ಷರಾದ ವಿಧ್ಯಾಧರ, ಜಯಪ್ರಕಾಶ ಜೆ.ಎಸ್, ಜತೆ ಕಾರ್ಯದರ್ಶಿ ರಾಜೇಶ್ ಸುವರ್ಣ, ನಿರ್ಗಮನ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ವಿವಿಧ ನಿರ್ದೇಶಕರಾದ ಮಂಜುನಾಥ ಆಚಾರ್ಯ, ಧನಂಜಯ ಬಾಳಿಗಾ, ಮಹಮ್ಮದ್ ವಳವೂರು, ರಿತೇಶ್ ಬಾಳಿಗಾ, ಲೋಕೇಶ್ ಸುವರ್ಣ, ಅಶ್ವನಿ ಕುಮಾರ್ ರೈ, ಡಾ. ರಮೇಶಾನಂದ ಸೋಮಯಾಜಿ, ಡಾ. ಆತ್ಮರಂಜನ ರೈ, ಪ್ರಕಾಶ್ ಕಾರಂತ, ಬಿ.ಸದಾಶಿವ ಬಾಳಿಗ, ಪುಷ್ಪರಾಜ್ ಹೆಗ್ಡೆ, ಡಾ. ಶಶಿಕಲಾ ಸೋಮಯಾಜಿ, ಕೆ. ನಾರಾಯಣ ಹೆಗ್ಡೆ, ಅಹಮದ್ ಮುಸ್ತಫಾ, ಭಾನುಶಂಕರ ಬನ್ನಿಂತಾಯ, ಶಾಂತಿಪ್ರಕಾಶ್ ಡಿಸೋಜ, ಪ್ರತಿಭಾ ರೈ ಆವರ ತಂಡ ಅಧಿಕಾರ ಸ್ವೀಕರಿಸಿತು.ನಿರ್ಗಮನ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಮತ್ತು ನಿರ್ಗಮನ ಕಾರ್ಯದರ್ಶಿ ಮಹಮ್ಮದ್ ಯಾಸಿರ್ ಕಲ್ಲಡ್ಕ ಅವರು ನೂತನ ಅಧ್ಯಕ್ಷ, ಕಾರ್ಯದರ್ಶಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಸದಸ್ಯರ ಸೇರ್ಪಡೆ ಮಾಡಲಾಯಿತು
ಈ ಸಂದರ್ಭ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ರೋಟರಿ ವತಿಯಿಂದ ಬ್ಲಡ್ ಬ್ಯಾಂಕ್ ಮತ್ತು ಅಂಧರ ಮನೆ ನಿರ್ಮಾಣಕ್ಕೆ ಧನಸಹಾಯ ಮಾಡಲಾಯಿತು.