ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ(ರಿ), ಬೆಂಗಳೂರು ಜಿಲ್ಲಾ ಘಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಕಂದಾಯ ಇಲಾಖೆಯ ವಾರ್ಷಿಕ ಕ್ರೀಡಾಕೂಟ 2026ರಲ್ಲಿ ಬಂಟ್ವಾಳ ತಂಡ ಸಮಗ್ರ ಚಾಂಪಿಯನ್ ಆಗಿ ಮೂಡಿಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿ, ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜನಾರ್ದನ್ ಜೆ ಮತ್ತು ಅವರ ತಂಡಕ್ಕೆ, ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಸಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸಹಿತ ಅಪರ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ, ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರರು, ಎನ್‌ಐಟಿಕೆ ಸಂಸ್ಥೆಯ ಡೀನ್, ರಾಜ್ಯಾಧ್ಯಕ್ಷರು– ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ(ರಿ), ತಾಲೂಕು ಮಟ್ಟದ ಕಂದಾಯ ನೌಕರರ ಸಂಘ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕ್ರೀಡಾಕೂಟದ ಫಲಿತಾಂಶ:
ಕ್ರಿಕೆಟ್:
ವಿಜೇತರು: ಬಂಟ್ವಾಳ
ರನ್ನರ್ಸ್: ಸುಳ್ಯ
ಹಗ್ಗಜಗ್ಗಾಟ (ಪುರುಷರು):
ವಿಜೇತರು: ಬಂಟ್ವಾಳ
ರನ್ನರ್ಸ್: ಜಿಲ್ಲಾಧಿಕಾರಿಗಳ ಕಚೇರಿ, ಮಂಗಳೂರು
ಹಗ್ಗಜಗ್ಗಾಟ (ಮಹಿಳೆಯರು):
ವಿಜೇತರು: ಬಂಟ್ವಾಳ
ರನ್ನರ್ಸ್: ಬೆಳ್ತಂಗಡಿ
ಥ್ರೋಬಾಲ್ (ಮಹಿಳೆಯರು):
ವಿಜೇತರು: ಸುಳ್ಯ
ರನ್ನರ್ಸ್: ಕಡಬ
ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ (ಪುರುಷರು):
ವಿಜೇತರು: ಬಂಟ್ವಾಳ
ರನ್ನರ್ಸ್: ಮಂಗಳೂರು
ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ (ಮಹಿಳೆಯರು):
ವಿಜೇತರು: ಜಿಲ್ಲಾಧಿಕಾರಿಗಳ ಕಚೇರಿ, ಮಂಗಳೂರು
ರನ್ನರ್ಸ್ : ಬೆಳ್ತಂಗಡಿ


Be the first to comment on "ಕಂದಾಯ ಇಲಾಖೆಯ ವಾರ್ಷಿಕ ಕ್ರೀಡಾಕೂಟ: ಬಂಟ್ವಾಳ ಸಮಗ್ರ ಚಾಂಪಿಯನ್"